Search
  • Follow NativePlanet
Share
ಮುಖಪುಟ » ಸ್ಥಳಗಳು » ಮೌಂಟ್ ಅಬು » ಹವಾಮಾನ

ಮೌಂಟ್ ಅಬು ಹವಾಮಾನ

ಮೌಂಟ್ ಅಬು ವರ್ಷಪೂರ್ತಿ ಉತ್ತಮವಾದ ಹವಾಗುಣವನ್ನು ಹೊಂದಿರುತ್ತದೆ. ಆದರು ಮೌಂಟ್ ಅಬುಗೆ ಹೋಗಲು ಬೇಸಿಗೆ ಅತ್ಯುತ್ತಮ ಕಾಲವಾಗಿದೆ. ಭಾರತದ ಬಿಸಿಲಿನಿಂದ ಬಚಾವಾಗಲು ಪ್ರವಾಸಿಗರು ಮೌಂಟ್ ಅಬುಗೆ ಹೋಗುತ್ತಿರುತ್ತಾರೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್): ಬೇಸಿಗೆಕಾಲದಲ್ಲಿ ಮೌಂಟ್ ಅಬುವಿನಲ್ಲಿ ಗಣನೀಯವಾದ ಉಷ್ಣಾಂಶ ಏರುತ್ತದೆ. ಆದರೆ ರಾಜಸ್ಥಾನದ ಇತರ ಭಾಗಕ್ಕೆ ಇದನ್ನು ಹೋಲಿಸಿದರೆ ಅದು ಕಡಿಮೆಯೆ ಆಗುತ್ತದೆ. ಆಗ ಇಲ್ಲಿನ ಗರಿಷ್ಠ ಉಷ್ಣಾಂಶವು 36° ಸೆಲ್ಷಿಯಸ್ ತಲುಪುತ್ತದೆ. ಈ ಕಾಲದಲ್ಲಿ ಸಾಮಾನ್ಯವಾಗಿ ಉಷ್ಣಾಂಶವು 19° ಯಿಂದ 21° ಸೆಲ್ಷಿಯಸ್ ವರೆಗೆ ಇರುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಡಿಲವಾದ ಮತ್ತು ತೆಳುವಾದ ಹತ್ತಿಯ ಬಟ್ಟೆಗಳನ್ನು ತಂದರೆ ಒಳ್ಳೆಯದು.

ಮಳೆಗಾಲ

(ಜುಲೈ ನಿಂದ ಸೆಪ್ಟೆಂಬರ್): ಮರುಭೂಮಿಯ ನಡುವೆ ನೆಲೆಸಿದ್ದರು ಮೌಂಟ್ ಅಬು ತಕ್ಕಮಟ್ಟಿಗೆ ಉತ್ತಮವಾದ ಮಳೆಯನ್ನು ಪಡೆಯುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 25° ಯಿಂದ ಕನಿಷ್ಠ 18° ಸೆಲ್ಶಿಯಸ್ ವರೆಗೆ ಇದ್ದು, ಹವಾಮಾನವು ತಣ್ಣಗೆ ಪರಿವರ್ತನೆ ಹೊಂದುತ್ತದೆ. ಮಾಸಿಕ ಮಳೆಯ ಪ್ರಮಾಣವು ಇಲ್ಲಿ 550 ರಿಂದ 600 ಮಿ.ಮೀ ವರೆಗೆ ಇರುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ ಮೌಂಟ್ ಅಬು ತಂಪಾಗಿ ಇರುತ್ತದೆ. ನವೆಂಬರ್ ನಿಂದ ಫೆಬ್ರವರಿಯವರೆಗಿನ ತಿಂಗಳುಗಳಲ್ಲಿ ಇಲ್ಲಿನ ಉಷ್ಣಾಂಶವು 12° ರಿಂದ 29° ಸೆಲ್ಶಿಯಸ್ ವರೆಗು ಕುಸಿಯುತ್ತದೆ. ಆಗ ಇಲ್ಲಿನ ಹವಾಮಾನವು ತುಂಬಾ ಕೊರೆಯುವ ಚಳಿಯಿಂದ ಕೂಡಿರುತ್ತದೆ. ಕೆಲವೊಮ್ಮೆ ಶೂನ್ಯದ ಹಾಸುಪಾಸು ಸಹ ತಲುಪುತ್ತದೆ.