ಸನ್ ಸೆಟ್ ಪಾಯಿಂಟ್ ಮೌಂಟ್ ಅಬುವಿನ ಸಂಜೆಯ ಪ್ರಸಿದ್ಧ ಆಕರ್ಷಣೆಯಾಗಿದೆ. ಇದು ನಕ್ಕಿ ಕೆರೆಯ ನೈಋತ್ಯಭಾಗದಲ್ಲಿ ನೆಲೆಸಿದೆ. ಈ ಸ್ಥಳವು ಬೆಟ್ಟಗಳ ಹಿನ್ನಲೆಯಲ್ಲಿ ಸೂರ್ಯಾಸ್ತಮಾನದ ಅತ್ಯಂತ ಸುಂದರವಾದ ದೃಶ್ಯಗಳನ್ನು ಒದಗಿಸುತ್ತದೆ. ನೋಡುತ್ತಿದ್ದರೆ ಇದು ನಿಜವೇ? ಅಥವಾ ಚಿತ್ರವೇ? ಎಂಬಂತೆ ಭಾಸವಾಗುವ ದೃಶ್ಯವೈಭವವು ನಿಮ್ಮನ್ನು ಸಂತೋಷದಲ್ಲಿ ತೇಲಿಸುತ್ತದೆ. ಈ ಸ್ಥಳವು ಇಲ್ಲಿನ ತಂಪಾದ ಮತ್ತು ಪ್ರಶಾಂತವಾದ ವಾತಾವರಣ ಅರಸಿ ಬರುವ ಪ್ರವಾಸಿಗರಿಂದಾಗಿ ಬೇಸಿಗೆಯಲ್ಲಿ ಅತ್ಯಂತ ಜನಪ್ರಿಯ ಆಕರ್ಷಣೆಯಾಗಿರುತ್ತದೆ. ವ್ಯಾಪಾರ ಮಾಡಲು ಇಚ್ಛಿಸುವವರು ಇಲ್ಲಿಗೆ ಸಮೀಪದ ಹನಿಮೂನ್ ಪಾಯಿಂಟ್ ಗೆ ಹೋಗಬಹುದು. ಇದು ಇಲ್ಲಿರುವ ಕಲಾವಸ್ತುಗಳ ಅಂಗಡಿ ಮತ್ತು ಉಪಾಹಾರಗೃಹಗಳಿಗೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಇಲ್ಲಿ ಉಡುಗೊರೆ ವಸ್ತುಗಳನ್ನು, ಪುಟ್ಟ ಪ್ರತಿಕೃತಿಗಳನ್ನು, ಚಿಕ್ಕ ಒಡವೆಗಳನ್ನು ಮತ್ತು ಬೊಂಬೆಗಳನ್ನು ಕೊಳ್ಳಬಹುದು.