ಮೌಂಟ್ ಅಬುವಿನಿಂದ ಕೇವಲ 800 ಮೀಟರ್ ದೂರದಲ್ಲಿರುವ ಆರನ ಹಳ್ಳಿಯಲ್ಲಿರುವ ಮೊಗ್ಲಿ ಲ್ಯಾಂಡ್ ನಲ್ಲಿ ಪುರಾತನ ಕಾಲದ ನಾಗರೀಕತೆಯ ಕುರುಹುಗಳು ದೊರೆತಿವೆ. ಅರಣ್ಯ ಅಧಿಕಾರಿಗಳ ಒಂದು ತಂಡವು ಇಲ್ಲಿ ನಡೆಸಿದ ಉತ್ಖನನದಲ್ಲಿ ಪುರಾತನ ಕಾಲದ ಮಡಿಕೆಗಳನ್ನು ಮತ್ತು ಇಟ್ಟಿಗೆಗಳನ್ನು ಪತ್ತೆ ಹಚ್ಚಿವೆ. ಇವುಗಳಲ್ಲಿ ಸುಮಾರು 1000 ವರ್ಷಗಳಷ್ಟು ಹಿಂದಿನ ಪಳೆಯುಳಿಕೆಗಳು ಸಹ ಸೇರಿವೆ. ಅದರ ಪ್ರಕಾರ ಈ ಸ್ಥಳವು ಆ ಕಾಲದಲ್ಲಿ ಯಾತ್ರಿಕರ ತಂಗುದಾಣವಾಗಿತ್ತು. ಈಗ ಇದನ್ನು ಒಂದು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈಗ ಇದನ್ನು ಮೊಗ್ಲಿ ಲ್ಯಾಂಡ್ ಎಂದು ಕರೆಯಲಾಗುತ್ತಿದೆ. ಏಕೆಂದರೆ ಇಲ್ಲಿನ ಅರಣ್ಯವು ರುಡ್ ಯಾರ್ಡ್ ಕಿಪ್ಲಿಂಗ್ಸ್ ರ ಪ್ರಸಿದ್ಧ ಪುಸ್ತಕ ಜಂಗಲ್ ಬುಕ್ ನಲ್ಲಿ ಬರುವ ಅರಣ್ಯವನ್ನು ಹೋಲುತ್ತದೆ. ಆ ಪುಸ್ತಕದ ಪ್ರಧಾನ ಪಾತ್ರದ ಹೆಸರು ’ಮೋಗ್ಲಿ’ .