Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋತಿಹಾರಿ » ಹವಾಮಾನ

ಮೋತಿಹಾರಿ ಹವಾಮಾನ

ಮಳೆಗಾಲದ ನಂತರ ಮೊತಿಹಾರಿಗೆ ಭೇಟಿ ನೀಡುವುದು ಸೂಕ್ತ. ಈ ಸಮಯದಲ್ಲಿ ಪ್ರಯಾಣ ಮತ್ತು ಸುತ್ತಾಟಕ್ಕೆ ವಾತಾವರಣವು ಅನುಕೂಲಕರವಾಗಿರುತ್ತದೆ. ಮಳೆಗಾಲದ ನಂತರ ಸುತ್ತಲ ಪ್ರಕೃತಿ ಇನ್ನಷ್ಟು ಸೌಂದರ್ಯದಿಂದ ನಳನಳಿಸುತ್ತದೆ.

ಬೇಸಿಗೆಗಾಲ

ಮೋತಿಹಾರಿಯಲ್ಲಿ ಬೇಸಿಗೆಯಲ್ಲಿ ಹೆಚ್ಚಿನ ಉಷ್ಣತೆಯಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 40 ರಿಂದ 45 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಮಾರ್ಚ್-ಮೇ ಬೇಸಿಗೆ ಕಾಲ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಮಳೆಗಾಲ

ಜೂನ್-ಆಗಸ್ಟ್ ಮಳೆಗಾಲ. ಈ ಸಮಯದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಈ ಸಮಯದಲ್ಲಿ ಉಷ್ಣತೆಯು ಕಡಿಮೆಯಾಗಿ ಸಹಜ ಸ್ಥಿತಿಗೆ ಮರಳುತ್ತದೆ.

ಚಳಿಗಾಲ

ಡಿಸಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಗರಿಷ್ಠ ಉಷ್ಣತೆಯು 23 ಡಿಗ್ರಿಗಳಿಗಿಂತ ಹೆಚ್ಚಾಗುವುದಿಲ್ಲ. ಕೆಲವು ಸಾರಿ ಕನಿಷ್ಠ ಉಷ್ಣತೆಯು 1 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ.