Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋರಿ » ಹವಾಮಾನ

ಮೋರಿ ಹವಾಮಾನ

ಮೋರಿಯಲ್ಲಿ ವರ್ಷಪೂರ್ತಿ ಆಹ್ಲಾದಕರವಾದ ವಾತಾವರಣವಿರುವುದರಿಂದ ಯಾವುದೆ ಸಮಯದಲ್ಲೂ ಭೇಟಿ ನೀಡಬಹುದು. ರಾಫ್ಟಿಂಗ್ ಇಷ್ಟಪಡುವವರು ಮಳೆಗಾಲದಲ್ಲಿ ಭೇಟಿ ನೀಡಿದರೆ ಉತ್ತಮ.

ಬೇಸಿಗೆಗಾಲ

(ಮಾರ್ಚ್-ಜೂನ್): ಮೋರಿಯಲ್ಲಿ ಮಾರ್ಚ್ ನಲ್ಲಿ ಪ್ರಾರಂಭವಾಗುವ ಬೇಸಿಗೆ ಜೂನ್ ತನಕ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನ ಕ್ರಮವಾಗಿ 23˚C ಮತ್ತು 9˚C.

ಮಳೆಗಾಲ

(ಜುಲೈ-ಅಕ್ಟೋಬರ್): ಜುಲೈನಲ್ಲಿ ಪ್ರಾರಂಭವಾಗುವ ಮಳೆಗಾಲ ಅಕ್ಟೋಬರ್ ನಲ್ಲಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಮೋರಿಯು ಅತ್ಯಲ್ಪ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಆದರೆ ಹಸಿರುಮಯ ವಾತಾವರಣವು ಕಣ್ಮನ ಸೆಳೆಯುತ್ತದೆ.

ಚಳಿಗಾಲ

(ನವಂಬರ್-ಫೆಬ್ರುವರಿ): ನವಂಬರ್ ನಲ್ಲಿ ಪ್ರಾರಂಭವಾಗುವ ಚಳಿಗಾಲ ಫೆಬ್ರುವರಿಯಲ್ಲಿ ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಮೋರಿಯಲ್ಲಿ ಸಾಮಾನ್ಯವಾಗಿ ದಾಖಲಾಗುವ ಗರಿಷ್ಠ ಹಾಗು ಕನಿಷ್ಠ ತಾಪಮಾನ ಕ್ರಮವಾಗಿ 8˚C ಮತ್ತು 2˚C. ಭಾರಿ ಹಿಮಪಾತವು ಸಾಮಾನ್ಯವಾಗಿರುತ್ತದೆ.