Search
  • Follow NativePlanet
Share
ಮುಖಪುಟ » ಸ್ಥಳಗಳು » ಮೋನ್ » ಹವಾಮಾನ

ಮೋನ್ ಹವಾಮಾನ

ಎಲ್ಲಾ ಮೂರು ಕಾಲಗಳೂ ಮೋನ್ ನ ಚಿತ್ರಣವನ್ನೇ ಸ್ವಲ್ಪ ಮಟ್ಟಿನಲ್ಲಿ ಬದಲಾಯಿಸುತ್ತವೆ. ಹೀಗಾಗಿ ನೀವು ಪ್ರವಾಸ ಕೈಗೊಳ್ಳಲು ಯಾವುದೇ ಅವಧಿಯನ್ನಾದರೂ ಬಳಸಬಹುದು. ಹೀಗಿದ್ದರೂ ಬೇಸಗೆ ಕಾಲ ಮತ್ತು ಚಳಿಗಾಲದಲ್ಲಿ ಹೆಚ್ಚಿನ ಪ್ರವಾಸಿಗಳು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಈ ಅವಧಿಯಲ್ಲಿ ಭೇಟಿ ನೀಡಲು ಮತ್ತು ಇಲ್ಲಿ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕೊನ್ಯಾಕ್ ಜನಗಳು ಆಚರಿಸುವ ಆಯೋಲಿಯಾಂಗ್ ಮೊನ್ಯು ಉತ್ಸವವನ್ನು ಬೇಸಗೆಯಲ್ಲಿ ಆಚರಿಸಲಾಗುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಮುಂದುವರಿಯುವ ಬೇಸಿಗೆ ಕಾಲದಲ್ಲಿ ನೀವು ಮೋನ್ ಗೆ ಭೇಟಿ ನೀಡುವಿರಾದರೆ ನೀವು ಬಹಳ ಉತ್ತಮವಾದ ಹವಾಮಾನವನ್ನು ಅನುಭವಿಸುತ್ತೀರಿ. ಸಾಮಾನ್ಯ ತಾಪಮಾನ್ 25 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಇರುತ್ತದೆ. ಇನ್ನೊಂದು ವಿಶೇಷವೆಂದರೆ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಆಗುವುದಿಲ್ಲ. ಅದರೂ ಆರ್ದ್ರ ಹವಾಮಾನ ಇರುತ್ತದೆ.

ಮಳೆಗಾಲ

ಮೇ ಯ ಕೊನೆಯ ಭಾಗದಲ್ಲಿ ಇಲ್ಲಿ ಮಳೆಗಾಲ ಆರಂಭವಾಗುತ್ತದೆ ಅಕ್ಟೋಬರ್ ತನಕ ಮಳೆಗಾಲ ಮುಂದುವರಿಯುತ್ತದೆ. ಮಳೆಗಾಲದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ವಾತಾವರಣದ ತೇವಾಂಶ 76 ಶೇಕಡಾ ಇರುತ್ತದೆ. ಸುತ್ತಮುತ್ತಲ ಹಸಿರು ಮತ್ತು ಬೆಟ್ಟಗಳ ನಡುವೆ ಮೋನ್ ನ ಮಳೆಗಾಲದ ಅನುಭವ ಒಂದು ವಿಶಿಷ್ಟ ಅನುಭವವಾಗಿದೆ.

ಚಳಿಗಾಲ

ಡಿಸೆಂಬರ್  ನಿಂದ ಫೆಬ್ರವರಿಯ ತನಕ ಮುಂದುವರೆಯುವ ಚಳಿಗಾಲದಲ್ಲಿ ಮೋನ್ ಬಹಳ ತಂಪಾಗಿರುತ್ತದೆ. ಕನಿಷ್ಟ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕಡಿಮೆ ತಲುಪುತ್ತದೆ. ಕ್ರಿಸ್ ಮಸ್ ಚಳಿಗಾಲದ ಅವಧಿಯಲ್ಲೇ ಇರುವ ಕಾರಣ ಅತ್ಯದ್ಭುತವಾದ ಮೋನ್ ಅನ್ನು ಪ್ರವಾಸಿಗರು ಈ ಅವಧಿಯಲ್ಲಿ ಕಾಣಬಹುದು. ಹೆಚ್ಚಿನ ಪ್ರವಾಸಿಗಳು ಇದೇ ಅವಧಿಯಲ್ಲಿ ಭೇಟಿ ನೀಡಲು ಬಯಸುತ್ತಾರೆ.