ಥಂಡರ್ ಜೋನ್ ಮೊಹಾಲಿಯಿಂದ ಕೇವಲ 4 ಕಿ ಮೀ ಅಂತರದಲ್ಲಿದೆ.ಇದನ್ನು ಉತ್ತರ ಭಾರತದ ಅತ್ಯುತ್ತಮ ಮನರಂಜನಾ ಮತ್ತು ವಾಟರ್ ಪಾರ್ಕ್ ಎಂದು ಪರಿಗಣಿಸಲಾಗಿದೆ.ಮೇ 15,2002 ರಲ್ಲಿ ಉದ್ಘಾಟಿಸಲಾದ ಈ ಮನೋರಂಜನಾ ಉದ್ಯಾನವನ 11 ಎಕರೆ ವಿಸ್ತಾರವನ್ನು ಹೊಂದಿದೆ.ಈ ಮನರಂಜನಾ ಪಾರ್ಕ್ ಆಕ್ಟೋಪಸ್, ಕೊಲಂಬಸ್, ಸೂರ್ಯ ಮತ್ತು ಚಂದ್ರ ಮತ್ತು ಕ್ಯಾಟರ್ಪಿಲ್ಲರ್ ಸೇರಿದಂತೆ 12 ರೋಮಾಂಚಕಾರಿ ಸವಾರಿಗಳನ್ನು ಹೊಂದಿದೆ.ಇತರ ರೋಮಾಂಚನಕಾರಿ ಸವಾರಿಗಳಾದ ಸಂಗೀತ ಬಾಬ್, ಸ್ಟ್ರೈಕಿಂಗ್ ಕಾರ್ಸ್, ಸ್ಪ್ಲಾಷ್, ಬೋಟ್ ಕ್ಲಬ್ ಮತ್ತು ಸ್ವಿಂಗಿಂಗ್ ಚೇರ್ಸ್ ಕೂಡ ಇಲ್ಲಿದೆ.ವಾಟರ್ ಪಾರ್ಕ್ ವಾಟರ್ ವೇವ್ಸ್ ಮತ್ತು ಸ್ಲೈಡ್ಸ್ ಒಳಗೊಂಡಿದ್ದು ಇದು ಮೋಜು ನೀಡುತ್ತದೆ.ಮರೆಯಲಾರದ ರೋಮಾಂಚಕ ಮನೋರಂಜನೆ ನೀಡುವ ಈ ಸ್ಥಳ ಪ್ರವಾಸಿಗರು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ.