ಶಿರಸಿ ಅಣೆಕಟ್ಟು ಅಥವಾ ಶಿರಸಿ ಜಲಪಾತ ಮಿರ್ಜಾಪುರದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿದೆ. ಈ ಅಣೆಕಟ್ಟು ಉತ್ತಮ ನೀರಿನ ಸಂಗ್ರಹ ಸೌಲಭ್ಯ ಹೊಂದಿದೆ ಮತ್ತು ತಂಡಾ ಜಲಪಾತದ ಹತ್ತಿರದಲ್ಲಿದೆ. ನೀರು ಗಣನೀಯ ಎತ್ತರದಿಂದ ಜಲಪಾತವಾಗಿ ಧುಮ್ಮಿಕ್ಕುವುದರಿಂದ ಸುಂದರ ಸ್ಥಳವಾಗಿ ಪರಿಗಣಿಸಲಾಗಿದೆ. ನೈಸರ್ಗಿಕ ಹಸಿರು ಸಸ್ಯ ಮತ್ತು ಪ್ರಾಣಿಗಳ ಸಮೃದ್ಧ ಸಂಕುಲ ಅದ್ಭುತ ಅನುಭವ ನೀಡುತ್ತವೆ.