Search
  • Follow NativePlanet
Share
ಮುಖಪುಟ » ಸ್ಥಳಗಳು» ಮಿರ್ಜಾಪುರ್

ಮಿರ್ಜಾಪುರ್ : ಕಲ್ಲಿನ ಕೆತ್ತನೆ ಇಲ್ಲಿ ಇನ್ನಷ್ಟು ವಿಶೇಷ!

19

ನಮಗೆ ಬೇಕೆನಿಸಿದಾಗ ಪ್ರಯಾಣಮಾಡಲು, ಎಲ್ಲಾ ಸಮಯದಲ್ಲೂ ಉತ್ತಮ ಹವಾಮಾನವಿರುವ ಸ್ಥಳವೊಂದು ಸಿಕ್ಕರೆ ಎಷ್ಟು ಸಂತೋಷವಾಬಹುದಲ್ಲವೇ? ಅದರಲ್ಲೂ ನೋಡಲು ಅದ್ಭುತವಾದ ಜಲಧಾರೆಗಳು, ಇತಿಹಾಸವನ್ನು ಹೇಳುವ ಕಲ್ಲಿನ ಕೆತ್ತನೆಗಳು ನಮ್ಮ ಪ್ರಯಾಣವನ್ನು ಇನ್ನಷ್ಟು ಆಸಕ್ತಿದಾಯಕವನ್ನಾಗಿಸಬಲ್ಲವು! ಅಂತಹ ಸ್ಥಳದ ನಿರಂತರ ಹುಡುಕಾಟದಲ್ಲಿ ತೊಡಗಿರುವ ಪ್ರವಾಸಿಗರಿಗೆ ಅಂತಹ ಒಂದು ಅದ್ಭುತ ಸ್ಥಳದ ಪರಿಚಯವನ್ನು ನಾವಿಲ್ಲಿ ಮಾಡುತ್ತಿದ್ದೇವೆ.

ಮಿರ್ಜಾಪುರ್ ಜಿಲ್ಲೆಯ ಕೇಂದ್ರವಾಗಿರುವ ಮಿರ್ಜಾಪುರ್ ಪಟ್ಟಣ, ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಒಂದಾಗಿದೆ. ಮಿರ್ಜಾಪುರ್ ಪ್ರಮುಖ ಆಕರ್ಷಣೆಗಳಲ್ಲಿ ಭಾರತದಲ್ಲಿನ ಬ್ರಿಟಿಷ್ ಯುಗದ ಅವಧಿಯಲ್ಲಿನ ಐತಿಹಾಸಿಕ ರಚನೆಗಳು  ಹಾಗೂ  ಹಲವಾರು ಘಟ್ಟಗಳು ಅತ್ಯಂತ ಪ್ರಮುಖವಾಗಿವೆ.  ಮಿರ್ಜಾಪುರ ಪಟ್ಟಣ 5000 ಕ್ರಿ.ಪೂ. ಗೆ ನಾಗರಿಕತೆಯಿಂದಲೇ ಅಸ್ತಿತ್ವದಲ್ಲಿದ್ದರೂ, ವಾಸ್ತವವಾಗಿ 1735 ರಲ್ಲಿ ಬ್ರಿಟಿಷ್ ಈಸ್ಟ್ ಭಾರತ ಕಂಪನಿ ಈ ನಗರವನ್ನು ಸ್ಥಾಪಿಸಿದರು.

ಪ್ರಾಚೀನ ಶಿಲಾಯುಗ ಬೆಲನ್ ನದಿ ಕಣಿವೆ ಪ್ರದೇಶದಲ್ಲಿ ಅಸ್ತಿತ್ವದಲ್ಲಿತ್ತು ಎಂಬುದನ್ನು ತೋರಿಸುವ ವರ್ಣಚಿತ್ರ ಕಲ್ಲುಗಳು ಮತ್ತು ಇತರ ಕರಕುಶಲ ವಸ್ತುಗಳ ಕೆತ್ತನೆ ರೂಪದಲ್ಲಿ ಸಾಕಷ್ಟು ಪುರಾವೆಗಳಿವೆ. ವಿಂಧ್ಯ ಶ್ರೇಣಿಯ ಮರಳುಗಲ್ಲಿನ ಕಂಡುಬರುವ ಕೆಲವು ಆಸಕ್ತಿದಾಯಕ ಪೆಟ್ರೋಗ್ಲಿಪ್  ಕ್ರಿ.ಪೂ17000 ನಷ್ಟು ಪುರಾತನವಾದವು.

ಈ ಜಿಲ್ಲೆ, ಇತಿಹಾಸಕಾರರು ಮತ್ತು ಪುರಾತತ್ವ ಆಸಕ್ತರನ್ನು ಆಕರ್ಷಿಸುತ್ತದೆ. ಇತಿಹಾಸ ಒಳಹೊಕ್ಕು ಪರಿಶೀಲಿಸುವುದಕ್ಕಾಗಿ ಬರುವವರನ್ನು ಹೊರತುಪಡಿಸಿ ಇಲ್ಲಿನ ಸುಂದರವಾದ ಅದರಲ್ಲೂ ವಿಶೇಷವಾಗಿ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ, ದೀಪಗಳಿಂದ ಬೆಳಗಿಸಲಾಗುವ ಘಟ್ಟಗಳನ್ನು ನೋಡಲು ಪ್ರವಾಸಿಗರೂ ಕೂಡ ಅಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಮಿರ್ಜಾಪುರ್ ತನ್ನ ಕಾರ್ಪೆಟ್ ಮತ್ತು ಹಿತ್ತಾಳೆಯ ಸಾಮಾನು ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.

ಮಿರ್ಜಾಪುರದಲ್ಲಿನ ಮತ್ತು ಸುತ್ತಲಿನ ಪ್ರವಾಸಿ ಸ್ಥಳಗಳು

ಇದರ ಐತಿಹಾಸಿಕ ಮಹತ್ವ ಮತ್ತು ಶಿಲಾಯುಗದಿಂದಲೂ ಬೇರೂರಿರುವ ನೆನಪುಗಳನ್ನು ಹೊರತುಪಡಿಸಿ, ಮಿರ್ಜಾಪುರ್ ಅದರ ಮನಮೋಹಕ ದೃಶ್ಯಗಳಿಗೂ ಸಹ ಹೆಸರುವಾಸಿಯಾಗಿದೆ. ಜಿಲ್ಲೆಯಲ್ಲಿ, ತಂಡಾ ಜಲಪಾತ, ಶಿರಸಿ ಅಣೆಕಟ್ಟು ಮತ್ತು ಮೆಜಾ ಅಣೆಕಟ್ಟನ್ನು ನೋಡಬಹುದು. ಜನಪ್ರಿಯ ಘಟ್ಟಗಳಲ್ಲಿ ಕೆಲವು ಪಕ್ಕಾ ಘಾಟ್ ಮತ್ತು ನಾರ್ ಘಾಟ್ ಗಳು ಪ್ರಸಿದ್ಧವಾಗಿವೆ. ಓಜಾಲ ಮೇಳ, ವಿಂಧ್ಯವಾಸಿನಿ ಜಯಂತಿ ಸಮಾರೋಹ, ಝೋಲಾನೋತ್ಸವ, ಲೋಹಂದಿ ಮೇಳ ಮತ್ತು ಕಂತಿತ್ ಮೇಳ ಸೇರಿದಂತೆ ಮಿರ್ಜಾಪುರ್ ನಲ್ಲಿ ನಡೆಯುವ ಹಲವು ಜಾತ್ರೆಗಳು ಮತ್ತು ಉತ್ಸವಗಳಿಗೆ ನೀವು ಸಾಕ್ಷಿಯಾಗಬಹುದು. ಈ ಸ್ಥಳಕ್ಕೆ ಬಂದಾಗ ಅಲ್ಲಿರುವಾಗ  ಶಿವ ದೇವಾಲಯ, ಕಾಲ ಭೈರವ ಮತ್ತು ಚುನಾರ್ ಕೋಟೆಗೂ ಭೇಟಿ ನೀಡಬಹುದು.

ಮಿರ್ಜಾಪುರ ಭೇಟಿಗೆ ಉತ್ತಮವಾದ ಸಮಯ

ಸೌಮ್ಯ ಮತ್ತು ಆಹ್ಲಾದಕರ ತಾಪಮಾನವಿರುವ ನವೆಂಬರ್ ನಿಂದ ಎಪ್ರಿಲ್ ತಿಂಗಳುಗಳ ಅವಧಿ ಮಿರ್ಜಾಪುರ್ ಭೇಟಿಗೆ ಸೂಕ್ತ ಸಮಯ.

ಮಿರ್ಜಾಪುರ ತಲುಪುವುದು ಹೇಗೆ?

ಮಿರ್ಜಾಪುರ ರೈಲ್ವೆ ಮತ್ತು ರಸ್ತೆ ಸಾರಿಗೆಯ ಉತ್ತಮ ಸಂಪರ್ಕ ಹೊಂದಿದೆ.

ಮಿರ್ಜಾಪುರ್ ಪ್ರಸಿದ್ಧವಾಗಿದೆ

ಮಿರ್ಜಾಪುರ್ ಹವಾಮಾನ

ಉತ್ತಮ ಸಮಯ ಮಿರ್ಜಾಪುರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಿರ್ಜಾಪುರ್

  • ರಸ್ತೆಯ ಮೂಲಕ
    ಮಿರ್ಜಾಪುರ್ ನಿಂದ ವಾರಣಾಸಿ, ಸಾರನಾಥ್ ಮತ್ತು ಲಕ್ನೋ ಸೇರಿದಂತೆ ಉತ್ತರ ಪ್ರದೇಶದ ಪ್ರಮುಖ ನಗರಗಳಿಂದ ನಿರಂತರ ಬಸ್ ಸೇವೆಯನ್ನು ಒದಗಿಸಲಾಗುತ್ತಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭಾಗ್ಮತಿ ಎಕ್ಸ್ ಪ್ರೆಸ್, ಛಂಬಲ್ ಎಕ್ಸ್ ಪ್ರೆಸ್, ಕೋಲ್ಕತಾ ಮೇಲ್, ಕಾಲ್ಕಾ ಮೇಲ್, ಪುರಿ ಎಕ್ಸ್ ಪ್ರೆಸ್, ಮಗಧ ಎಕ್ಸ್ ಪ್ರೆಸ್ ಮತ್ತು ಪುರುಷೋತ್ತಮ್ ಎಕ್ಸ್ ಪ್ರೆಸ್ ಮೊದಲಾದ ಅನೇಕ ರೈಲುಗಳು ಮಿರ್ಜಾಪುರ್ ನಿಲ್ದಾಣದ ಮೂಲಕ ಹಾದು ಹೋಗುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಹತ್ತಿರದ ವಿಮಾನ ನಿಲ್ದಾಣವೆಂದರೆ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ವಾರಣಾಸಿ ವಿಮಾನ ನಿಲ್ದಾಣ. ಇಲ್ಲಿಂದ ನೀವು ಬಸ್ ಅಥವಾ ಟ್ಯಾಕ್ಸಿ ಮೂಲಕ ಮಿರ್ಜಾಪುರ್ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri