Search
  • Follow NativePlanet
Share
ಮುಖಪುಟ » ಸ್ಥಳಗಳು » ಮಯೂರ್ಭಂಜ್ » ಆಕರ್ಷಣೆಗಳು » ಖಿಚಿಂಗ

ಖಿಚಿಂಗ, ಮಯೂರ್ಭಂಜ್

1

ಖಿಚಿಂಗ ಇದು ಪ್ರಾಚೀನ ಕಾಲದಿಂದಲೂ ದೇವಾಲಯದ ನಗರವಾಗಿದೆ. ಈ ನಗರವು ಭಂಜ ವಂಶದ ರಾಜಧಾನಿಯಾಗಿ 9 ರಿಂದ 10 ನೇ ಶತಮಾನದವರೆಗೂ ಕಾರ್ಯ ನಿರ್ವಹಿಸಿದೆ. ಕಲೆ, ವಾಸ್ತು ಶಿಲ್ಪ ಮತ್ತು ಸಂಸ್ಕತಿಯ ಮುಂದುವರೆದ ಸಂಪ್ರದಾಯಗಳು ಖಿಚಿಂಗ ಗೆ ಅದರ ಕಳೆದು ಹೋದ ವೈಭವ ಮತ್ತು ದಿವ್ಯಕಾಂತಿಯನ್ನು ಮರಳಿ ತಂದು ಕೊಟ್ಟಿವೆ. ಭಂಜ ವಂಶದ ಆಡಳಿತಗಾರಉ ಮಾ ಖಿಚಕೇಶ್ವರಿಯ ಪರಮ ಭಕ್ತರು ಮತ್ತು ಆರಾಧಕರಾಗಿದ್ದರು.

ಈ ದೇವತೆಯ ಪೂಜೆಯನ್ನು ಬಹು ಸಂಭ್ರಮದಿಂದ, ಉತ್ಸಾಹದಿಂದ ಆಚರಿಸುತ್ತಿದ್ದರು. ಈ ದೇವಿಗೆ ಖಿಜಂಗೇಶ್ವರಿ ಎಂಬ ಇನ್ನೊಂದು ಹೆಸರಿದೆ. ಈ ದೇವಸ್ಥಾನವು ಖಿಚಿಂಗ ಮತ್ತು ಮಯೂರ್ಭಂಜ ನಗರಕ್ಕೆ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ದೇವಾಲಯವು ಅನೇಕ ಆಡಳಿತಗಾರರನ್ನು ಮತ್ತು ರಾಜಭಕ್ತರನ್ನು ಕಂಡಿದೆ. ಅನೇಕ ರಾಜರುಗಳು ದೇವಿಗಾಗಿ ಹರಕೆಯ ರೂಪದಲ್ಲಿ ತಮ್ಮ ಶಿರವನ್ನೇ ಅರ್ಪಿಸಿದ್ದಾರೆ. ಈ ರಾಜರುಗಳ ಹೆಸರನ್ನು ಈ ಅಲ್ಪಾವಧಿಯಲ್ಲಿ ಮರೆಯಲಾಗಿತ್ತು.

ಆದರೆ ಭಂಜ ವಂಶದ ಮಹಾರಾಜ ಪೂರ್ಣ ಚಂದ್ರ ಭಂಜ ದೇವ ಮತ್ತು ಅವರ ಸಹೋದರ ಪ್ರತಾಪ ಚಂದ್ರ ಭಂಜ ದೇವರು 1925 ರಲ್ಲಿ ಈ ರಾಜರುಗಳ ಹೆಸರನ್ನು ಪತ್ತೆ ಮಾಡಿ ದಾಖಲಿಸಿದ್ದಾರೆ. ಈ ದೇವಸ್ಥಾನದ ಹತ್ತಿರದಲ್ಲಿರುವ ವಸ್ತು ಸಂಗ್ರಹಾಲಯವು ಅನೇಕ ಕರಕುಶಲ ವಸ್ತುಗಳು ಮತ್ತು ಪ್ರತಿಮೆಗಳನ್ನು ಹೊಂದಿದೆ. ಇಲ್ಲಿನ ಪುರಾತನ ವಸ್ತುಗಳನ್ನು ವಸ್ತು ಪತ್ತೆ ಮಾಡುವ ಕಾರ್ಯಪ್ರಯತ್ನದಲ್ಲಿ ಈ ಅಮೋಘ ವಸ್ತುಗಳು ದೊರೆತಿವೆ. ಈ ಸ್ಥಳಕ್ಕೆ ಭೇಟಿ ಕೊಡಲು ಯೋಗ್ಯವಾದ ಸಮಯ ಎಂದರೆ ಶಿವರಾತ್ರಿ. ಈ ಸಮಯದಲ್ಲಿ ಖಿಚಿಂಗನಲ್ಲಿ ಏಳು ದಿನಗಳ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆಗ ಈ ಹಬ್ಬವನ್ನು ನೋಡುವುದೇ ಕಣ್ಣಿಗೆ ಆನಂದ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri