ಹಾರ್ಟ್ ಪಾಯಿಂಟ್ನಿಂದ ಸುತ್ತಲಿನ ಪ್ರದೇಶದ ಹಸಿರು ಸಿರಿಯನ್ನು ನೋಡಬಹುದು. ಇದು ಮಾಥೆರಾನ್ನ ಜನಪ್ರಿಯವಾದ ತಾಣವಾಗಿದ್ದು, ಪಶ್ಚಿಮ ಘಟ್ಟದ ಬೆಟ್ಟಗಳು ಮತ್ತು ಮುಂಬೈನ ರಾತ್ರಿ ಲೈಟಿನ ಸನ್ನಿವೇಶವನ್ನು ಸುಂದರವಾಗಿ ಕಟ್ಟಿಕೊಡುತ್ತದೆ.
ಸಾಮಾನ್ಯ ಜನಜೀವನದಿಂದ ಈ ಪ್ರದೇಶವು ದೂರವಿದ್ದು, ಇಲ್ಲಿನ ಪ್ರಶಾಂತತೆಯು ರಿಲ್ಯಾಕ್ಸ್ ಮಾಡುವುದಕ್ಕೆ ಸೂಕ್ತ ಪ್ರದೇಶವಾಗಿದೆ. ನಿಮ್ಮ ಸಂಗಾತಿಯ ಜೊತೆಗೆ ಒಂದು ಸಂಜೆಯನ್ನು ಕಳೆಯವುದಕ್ಕೆ ಇದು ಸೂಕ್ತವಾದ ತಾಣ.