ಮಾರ್ಗೊ ದಕ್ಷಿಣ ಗೋವಾದ ಒಂದು ಪಟ್ಟಣವಾಗಿದ್ದು, ಈ ಭಾಗದ ಹಲವು ಕಡಲ ತೀರಗಳಿಗೆ ಸನ್ನಿಹಿತವಾಗಿದೆ. ಆದ್ದರಿಂದ ಬಹು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ತಂಗಲು ಇಷ್ಟಪಡುತ್ತಾರೆ.ಮಾರ್ಗೊನಲ್ಲಿ ಹಲವಾರು ದೇವಾಲಯಗಳು, ಚರ್ಚಗಳು ಮತ್ತು ಮಸೀದಿಗಳಿರುವುದನ್ನು ಕಾಣಬಹುದು. ಇಲ್ಲಿರುವ ಶಿಯಾ ಇಮಾಮ್ ಇಸ್ಮೈಲಿ ಖೋಜಾ ಜಮಾತಖಾನಾ ಮತ್ತು ಅಕ್ವೇಮ ಮಸೀದಿಗಳಿಗೆ ಮುಸ್ಲಿಮ ಯಾತ್ರಿಕರು ಯಾವಾಗಲೂ ಭೇಟಿ ನೀಡುತ್ತಿರುತ್ತಾರೆ.ಬೆನೌಲಿಮ್, ಕೋಲ್ವಾ, ವರ್ಕಾ, ಬೆತುಲ್ ಮತ್ತು ಮಜೊರ್ಡಾ ಕಡಲ ತೀರಗಳಿಗೆ ಮಾರ್ಗೊ ತುಂಬಾ ಹತ್ತಿರವಾಗಿದ್ದು ಒಂದೇ ದಿನದಲ್ಲಿ ಎಲ್ಲ ಬೀಚಗಳಿಗೆ ಭೇಟಿ ನೀಡಬಹುದಾಗಿದೆ.
ಇಲ್ಲೂ ಕೂಡ ಶ್ಯಾಕಗಳು ಲಭ್ಯವಿದ್ದು ಗೋವನ್ ಮಾದರಿಯ ಖಾದ್ಯಗಳನ್ನು ಸವಿಯಬಹುದು. ಇನ್ನು 'ಶಾಪಿಂಗ್'ಮಾಡಲು ಹಲವಾರು ಮಳಿಗೆಗಳು ಇಲ್ಲಿದ್ದು ದಿನ ಪೂರ್ತಿ ಸುತ್ತಾಡಬಹುದು. ತಂಗಲು ಮಾರ್ಗೊ ಸುತ್ತಮುತ್ತ ಹಲವಾರು ವಸತಿ ವ್ಯವಸ್ಥೆಗಳಿದ್ದು, ಬೇಕಾದರೆ ತಾಜ್, ಲೀಲಾ, ಹ್ಯಾಟ್ಟ ಮುಟಾದವುಗಳಿಗೂ ಹೋಗಬಹುದು. ಇಲ್ಲಿರುವ ಒಷಿಯಾ ಶಾಪಿಂಗ ಮಾಲ್ ಆಧುನಿಕ ಶೈಲಿಯ ಮಳಿಗೆಯಾಗಿದ್ದು ವಿವಿಧ ಬಗೆಯ ವಸ್ತುಗಳು ದೊರಕುತ್ತವೆ. ಸಾಂಪ್ರದಾಯಿಕ ಶೈಲಿಯ ಸಿ ಫುಡ್ ತಿನ್ನಲು ಬಯಕೆಯಾದಲ್ಲಿ ಬೆತುಲ್ ಕಡಲ ತೀರದ ಹತ್ತಿರವಿರುವ 'ಫಿಶರಮನಸ್ ವ್ಹಾರ್ಫ್'ಗೆ ಭೇಟಿ ನೀಡಿರಿ.ದಾಬೋಲಿಮ ವಿಮಾನ ನಿಲ್ದಾಣದಿಂದ ಮಾರ್ಗೊಗೆ ಕ್ಯಾಬಗಳ ಮುಖಾಂತರ ಸುಲಭವಾಗಿ ತಲುಪಬಹುದು. ಇಷ್ಟೆ ಅಲ್ಲದೆ ವಾಸ್ಕೊ, ದಾಬೋಲಿಮ ಮತ್ತು ಮಾರ್ಗೊ ರೈಲು ನಿಲ್ದಾಣಗಳೂ ಕೂಡ ಈ ನಗರಕ್ಕೆ ಹತ್ತಿರವಾಗಿವೆ. ಡ್ರೈವ್ ಮಾಡುವ ಹಾಗಿದ್ದರೆ ಪಣಜಿ ಮತ್ತು ವಾಸ್ಕೊದಿಂದಲೂ ಕೂಡ ಇಲ್ಲಿಗೆ ಸರಳವಾಗಿ ತಲುಪಬಹುದಾಗಿದೆ.