Search
  • Follow NativePlanet
Share
ಮುಖಪುಟ » ಸ್ಥಳಗಳು» ಮರಾರಿಕುಲಂ

ಮರಾರಿಕುಲಂ - ಕರಾವಳಿ ತೀರದಲ್ಲಿ ಒಂದು ಪಯಣ

9

ಮರಾರಿಕುಲಂ ಇರುವುದು ಅಲಪ್ಪುಳ ಎಂಬ ಪಟ್ಟಣದ ಸಮೀಪದಲ್ಲಿ. ಮರಾರಿ ಎಂಬ ಹಳದಿ ಮರಳಿನ ಬೀಚ್ನಿಂದಾಗಿ ಈ ಪ್ರದೇಶ ಪ್ರಸಿದ್ಧವಾಗಿದೆ. ಅಲಪ್ಪುಳದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಈ ಹಳ್ಳಿಗೆ ನೀವು ಹೋದರೆ ಇತಿಹಾಸ ಪುಟವನ್ನು ತಿರುವಿಹಾಕಿದ ಅನುಭವವಾಗುತ್ತದೆ. ಯಾಕೆಂದರೆ ಇಂದಿಗೂ ಇಲ್ಲಿನ ಜನ ಪುರಾತನ ಜೀವನ ಶೈಲಿಯನ್ನೇ ಅನುಸರಿಸುತ್ತಿದ್ದಾರೆ. ಈ ಹಳ್ಳಿಯಲ್ಲಿ ನೇಯ್ಗೆ ಮುಖ್ಯ ಕಸುಬು. ಈ ಹಳ್ಳಿಯ ಭೂಮಿ ಅತ್ಯಂತ ಫಲವತ್ತಾದದ್ದು. ಮಾನಸಿಕ ನೆಮ್ಮದಿಗೆ ಹೇಳಿ ಮಾಡಿಸಿದ ಸ್ಥಳವಿದು. ಮೀನುಗಾರರು ಪ್ರತಿದಿನವೂ ನಡೆಸುವ ಚಟುವಟಿಕೆ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪ್ರವಾಸವೇ ಪ್ರಮುಖ..!

ವಾಟರ್ ಸ್ಪೋರ್ಟ್ಸ್, ಕ್ಯಾಟರ್ ಮೆನ್, ಯೋಗ, ಆಯುರ್ವೇದ ಚಿಕಿತ್ಸೆ, ವೈದ್ಯಕೀಯ ಚಿಕಿತ್ಸೆಯು ಇಲ್ಲಿನ ಪ್ರಮುಖ ಆಕರ್ಷಣೆ. ವಾತಾವರಣ ಹದವಾಗಿರುತ್ತದೆ, ಅತ್ಯಂತ ಉಷ್ಣತೆ ಅಥವಾ ಅತ್ಯಂತ ಚಳಿ ಇಲ್ಲಿಲ್ಲ. ಇಲ್ಲಿರುವ ಕೊಕ್ಕಮಂಗಲಂ ಚರ್ಚನ್ನು ಸಂತ ಥಾಮಸ್ ಸ್ಥಾಪಿಸಿದರು ಎಂದು ಹೇಳಲಾಗಿದೆ. ಇದು ಇಲ್ಲಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ಕನ್ಯೆ ಮೇರಿಗೆ ಈ ಚರ್ಚನ್ನು ಅರ್ಪಿಸಲಾಗಿದೆ ಮತ್ತು ತುಂಪೋಲಿ ಎಂಬ ಕರಾವಳಿ ಪಟ್ಟಣವೊಂದರಲ್ಲಿ ಈ ಚರ್ಚ್ ಇದೆ. ಇಲ್ಲಿನ ಇತರ ಪ್ರಮುಖ ಪ್ರವಾಸಿ ತಾಣಗಳೆಂದರೆ, ಶಿವ ದೇವಸ್ಥಾನ, ಕೊಕ್ಕಮಂಗಲಂ ಸಂತ ಅಪೋಸಲ್ ಚರ್ಚ್, ಅರೂರ್, ಅರುಥಂಕಲ್, ಪೂಚ್ಛಕ್ಕಲ್, ಪನವಲ್ಲಿ, ವೆಲೋರ್ವಟ್ಟಮ್ ಮತ್ತು ಅರ್ಥುಂಕಲ್.

ಶಿವ ದೇವಸ್ಥಾನವು ವಾಸ್ತುಶಿಲ್ಪ ಶೈಲಿಗೆ ಹೆಸರಾದದ್ದು. ಇತರ ದೇವಸ್ಥಾನಗಳೆಂದರೆ ಚೇರ್ಥಾಲ ಕರ್ತಿಯೇನಿ ದೇವಸ್ಥಾನ, ಇಲ್ಲಿ ದೇವಿ ಕರ್ತಾಯನಿಯ ಮೂರ್ತಿಯಿದೆ. ಕಂಚಿಕುಂಗ್ಲಾರಾ ದೇವಸ್ಥಾನ, ಇದು ಇನ್ನೊಂದು ಪ್ರಮುಖ ಪ್ರವಾಸಿ ತಾಣ. ಇಲ್ಲಿ ಭಗವತಿಯ ಮೂರ್ತಿಯಿದೆ.

ಪೂಚ್ಚಕ್ಕಲ್ ಪಟ್ಟಣದ ಸಮೀಪ ಹಲವು ಆಕರ್ಷಕ ದೇವಸ್ಥಾನಗಳಿವೆ.

ಮರಾರಿಕುಲಂ ಗೆ ಹೋಗುವುದು ಹೇಗೆ

ಮರಾರಿಕುಲಂ ಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಸಬಹುದು. ದಕ್ಷಿಣ ಭಾರತದ ಬಹುತೇಕ ಪ್ರಮುಖ ನಗರಗಳಿಂದ ಇಲ್ಲಿಗೆ ನೇರ ಸಂಪರ್ಕವಿದೆ.

ಪ್ರವಾಸ ಯಾವಾಗ?

ಚಳಿಗಾಲದ ರಜಾದಿನಗಳಲ್ಲಿ ಈ ಸುಂದರ ಹಳ್ಳಿಗೆ ಭೇಟಿಕೊಡಿ.

ಮರಾರಿಕುಲಂ ಪ್ರಸಿದ್ಧವಾಗಿದೆ

ಮರಾರಿಕುಲಂ ಹವಾಮಾನ

ಉತ್ತಮ ಸಮಯ ಮರಾರಿಕುಲಂ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮರಾರಿಕುಲಂ

  • ರಸ್ತೆಯ ಮೂಲಕ
    ಮರಾರಿಕುಲಂ ಗೆ ಸಮೀಪದಲ್ಲಿ ಸುಮಾರು 5 ಕಿ.ಮೀ ದೂರದಲ್ಲಿ ಎಸ್​ಎಲ್​ ಪುರಂ ಇದೆ, ಇಲ್ಲಿಂದ ರಾ.ಹೆ 47 ಹಾದು ಹೋಗುತ್ತದೆ. ಕೊಚ್ಚಿಯಿಂದ ಮರಾರಿಕುಲಂ ಗೆ 30 ಕಿ.ಮೀ ದೂರ. ಕೇರಳ ರಾಜ್ಯ ಸಾರಿಗೆಯ ಹಲವು ಬಸ್​ಗಳು ಮರಾರಿಕುಲಂ ಗೆ ನಿತ್ಯವೂ ಸಂಚರಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮರಾರಿಕುಲಂ ರೈಲ್ವೆ ನಿಲ್ದಾಣವು ಕೇರಳದ ವಿವಿಧ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಎರ್ನಾಕುಲಂ-ಅಲಪ್ಪುಳ ಮಾರ್ಗದ ಮಧ್ಯೆ ಮರಾರಿಕುಲಂ ಇದೆ. ಒಂದು ವೇಳೆ ನಿಮಗೆ ಸಮೀಪದ ನಗರದಿಂದ ನೇರವಾಗಿ ಮರಾರಿಕುಲಂ ಗೆ ರೈಲು ಸಂಪರ್ಕವಿಲ್ಲದಿದ್ದಲ್ಲಿ, ಸಮೀಪದ ರೈಲ್ವೆ ಸ್ಟೇಷನ್​ಗೆ ಆಗಮಿಸಿ ಅಲ್ಲಿಂದ ಮರಾರಿಕುಲಂ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮರಾರಿಕುಲಂ, ದಕ್ಷಿಣ ಭಾರತದ ಪ್ರಮುಖ ನಗರಗಳಿಂದ ಸಂಪರ್ಕವನ್ನು ಹೊಂದಿದೆ. ಕೊಚ್ಚಿನ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ನೆಡುಂಬಸ್ಸೆರಿ ವಿಮಾನ ನಿಲ್ದಾಣ) ಮರಾರಿಕುಲಂ ಗೆ ಸಮೀಪದ ವಿಮಾನ ನಿಲ್ದಾಣ. ಈ ವಿಮಾನ ನಿಲ್ದಾಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat