Search
  • Follow NativePlanet
Share

ಮಾನಸ - ಪ್ರವಾಸಮಾಡಲು ಒಂದು ಪ್ರಶಾಂತ ಪುಟ್ಟ ತಾಣ

8

ಮಾನಸವು,  ಬರ್ನಾಲಾ - ಸರ್ದುಲ್ಘರ್ ಹೆದ್ದಾರಿಯಲ್ಲಿ ಪಂಜಾಬಿನ ಪೂರ್ವ ಭಾಗದಲ್ಲಿ ’ಶ್ವೇತ ಬಂಗಾರದ ಪ್ರದೇಶ’ ವೆಂದು ಜನಪ್ರಿಯವಾಗಿರುವ  ಮಾನಸ ಜಿಲ್ಲೆಯಲ್ಲಿರುವ  ಒಂದು ಪಟ್ಟಣ.  ಇಲ್ಲಿ ಬೆಳೆಯುವ ಹತ್ತಿಯ ದೃಶ್ಯವು, ಅದರಲ್ಲೂ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪೂರ್ಣ ವೈಭವದಿಂದ ಕಂಗೊಳಿಸುತ್ತಿದ್ದು ಹಾಲಿನ ಶ್ವೇತ ಬಣ್ಣದ ಹತ್ತಿಯಿಂದ ಈ ಸ್ಥಳವು  ’ಶ್ವೇತ ಬಂಗಾರದ ಪ್ರದೇಶ’ ವೆಂದು ಪ್ರಸಿದ್ಧಿಯಾಗಿದೆ.

1762 ರಿಂದ 1857 ರ ವರೆಗೆ ಕೈತಲ್ ಸಿಖ್ ಸಾಮ್ರಾಜ್ಯದ ಭಾಗವಾಗಿರುವದಕ್ಕೂ ಮೊದಲು ಇದು ಮೂಲತಹ ಪುಲ್ಕಿಯ ಸಿಖ್ ಸಾಮ್ರಾಜ್ಯದ ಭಾಗವಾಗಿತ್ತು. ಈ ಪ್ರದೇಶದ ಮೂಲವನ್ನು  ಸಿಂಧೂ ಕಣಿವೆ ನಾಗರೀಕತೆ (Indus Valley Civilisation) ಯಲ್ಲಿ ಗುರುತಿಸಬಹುದಾಗಿದೆಯೆಂದು ಹಾಗೂ ಭಾರತದ ಪುರಾತತ್ವ ಇಲಾಖೆಯ(ASI) ಮಾಹಿತಿಯಲ್ಲಿ ಹರಪ್ಪ ಮತ್ತು ಮೊಹೆಂಜದಾರೋ ಅವಶೇಷಗಳನ್ನು ಆ ಪ್ರದೇಶದ ಕೆಲವು ಹಳ್ಳಿಗಳಲ್ಲಿ ದೊರಕಿತೆಂಬ ದಾಖಲೆಗಳಿವೆ.

ಭೂಗೋಳಶಾಸ್ತ್ರ, ಸಂಸ್ಕೃತಿ ಮತ್ತು ಸಂಪ್ರದಾಯ

ವಾಯುವ್ಯದಲ್ಲಿ ಭಟಿಂಡಾ ಜಿಲ್ಲೆ ಮತ್ತು ಈಶಾನ್ಯದಲ್ಲಿ ಸಂಗ್ರೂರ್ ಜಿಲ್ಲೆಗಳ ಗಡಿಗಳಿಗೆ  ಹೊಂದಿಕೊಂಡು ಮಾನಸ ಪಟ್ಟಣವು ನೆಲೆಸಿದೆ. ಮಾನಸ ಪಟ್ಟಣವು ಹರಿಯಾಣ ರಾಜ್ಯದ ದಕ್ಷಿಣದಲ್ಲಿದೆ.  ಈ ನಗರಕ್ಕೆ ಭಾಯ್ ಗುರ್ದಾಸ್ ಅವರು ಅಡಿಪಾಯವನ್ನು ಹಾಕಿದರೆಂದು ನಂಬಲಾಗಿದೆ. ಅವರ ಗೌರವಾರ್ಥ ಪ್ರತಿ ವರ್ಷ ಮಾರ್ಚ್ - ಏಪ್ರಿಲ್ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ.  ಆ ಸಮಯದಲ್ಲಿ ಭಕ್ತರು ಭಾಯ್ ಗುರುದಾಸ್ ಅವರ ಸಮಾಧಿಗೆ ಲಡ್ಡು ಮತ್ತು ಬೆಲ್ಲವನ್ನು ಅರ್ಪಿಸುತ್ತಾರೆ. ಹೋಳಿ, ದೀಪಾವಳಿ, ದಸರಾ, ಬೈಸಾಖಿ ಮತ್ತು ಇತರ ಹಬ್ಬಗಳನ್ನು ಜನರು ಸಂತೋಷ ಮತ್ತು ವಿನೋದದಿಂದ ಆಚರಿಸುತ್ತಾರೆ.

ಬೈಸಾಖಿಯನ್ನು ಸಾಮಾನ್ಯವಾಗಿ ದಿನಾಂಕ 13 ಏಪ್ರಿಲ್‍ರಂದು  ಆಚರಿಸಲಾಗುತ್ತದೆ.  ಈ ಸಮಯದಲ್ಲಿ  ರೈತರಿಗೆ ಅಧಿಕ ಸುಗ್ಗಿ ಮತ್ತು ಉತ್ತಮ ಇಳುವರಿ ಭವಿಷ್ಯದಲ್ಲಿಯೂ ಆಗಲೆಂದು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಮಾನಸದ ಭೂಮಿಯು ಪಂಜಾಬ್ ಪ್ರದೇಶದ ಅತ್ಯಂತ ಫಲವತ್ತಾಗಿದ್ದು ಇದನ್ನು ’ಶ್ವೇತ ಬಂಗಾರದ ಪ್ರದೇಶ’ವೆಂದು ಕರೆಯುತ್ತಾರೆ. ಇಲ್ಲಿ ಕೃಷಿಯು ಮುಖ್ಯ‍ಉದ್ಯೋಗವಾಗಿದ್ದು ಅದರಲ್ಲಿ ಹತ್ತಿಯ ಬೆಳೆ ಪ್ರಮುಖವಾಗಿದೆ. ಮಾನಸಕ್ಕೆ ಪ್ರಯಾಣ ಬೆಳೆಸಿದ್ದಲ್ಲಿ ಪ್ರವಾಸಿಗರಿಗೆ ಸ್ಥಳೀಯರ ಸ್ನೇಹಪೂರ್ವಕ ಮತ್ತು ಆತ್ಮೀಯತೆಯು ಪರಿಚಯವಾಗುವುದು. ರಸ್ತೆಬದಿಯ ಧಾಬಾಗಳು ಪಂಜಾಬಿನ ವಿಶ್ವಾಸಾರ್ಹ ಮತ್ತು ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲು ಆಪ್ಯಾಯಮಾನವಾಗಿರುತ್ತದೆ. ಈ ಧಾಬಾಗಳಲ್ಲದೆ ನಗರದ ಎಲ್ಲೆಡೆ ಅನೇಕ ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳೂ ಸಹ ಇವೆ.

ಮಾನಸ ಮತ್ತು ಸುತ್ತ ಮುತ್ತ ಇರುವ ಪ್ರವಾಸಿ ಸ್ಥಳಗಳು

ಪ್ರವಾಸಿಗಳಿಗೆ ಮಾನಸ ಪ್ರವಾಸೋದ್ಯಮವು ಸುತ್ತಮುತ್ತ ಇರುವ ಅನೇಕ ನೋಡಬೇಕಾದ ಸ್ಥಳಗಳಿಂದ ಜನಪ್ರಿಯವಾಗಿದೆ.  ಮಾನಸದಲ್ಲಿರುವ ಭಿಖಿ ಮತ್ತು ಬರೇಟ ಹಾಗೂ ಹತ್ತಿರದಲ್ಲಿರುವ ಬುಧ್ಲಾಡ, ಡಲೆವಾಲ ಮತ್ತು ಸರ್ದುಲ್‍ಘರ್‌ಗಳಿಗೆ ಪ್ರವಾಸಿಗಳು ವರ್ಷಪೂರ್ತಿ ಆಗಿಂದಾಗ್ಗೆ ಬರುತ್ತಿರುತ್ತಾರೆ.

ಮಾನಸವನ್ನು ತಲುಪುವುದು ಹೇಗೆ?

ಮಾನಸ ಪಟ್ಟಣವು ಎಲ್ಲಾ ರೀತಿಯಲ್ಲಿ ರಾಜ್ಯದ ರಾಜಧಾನಿ ಚಂಡೀಘಢ ಮತ್ತು ದೇಶದ ರಾಜಧಾನಿ ದೆಹಲಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ. ಉತ್ತರ ರೈಲ್ವೆಯ ದೆಹಲಿ -  ಭಟಿಂಡಾ ರೈಲುಮಾರ್ಗದ ಮೂಲಕ ಇದು ನವ ದೆಹಲಿಯಿಂದ ಅನೇಕ ಪ್ಯಾಸೆಂಜರ್ ಗಾಡಿಗಳ ನೇರ ಸಂಪರ್ಕವನ್ನು ಹೊಂದಿದೆ. ಅಲ್ಲದೆ, ಹಲವಾರು ಬಸ್ಸುಗಳು ಪ್ರಮುಖ ನಗರಗಳಿಂದ ಲಭ್ಯವಿದೆ.  ಸಮೀಪದ ವಿಮಾನ ನಿಲ್ದಾಣ ಲೂಧಿಯಾನದಲ್ಲಿರುವ ’ಸಾಹ್ನೆವಾಲ್’, ಪಟ್ಟಣದಿಂದ ಸುಮಾರು 127.7 ಕಿ.ಮೀ. ದೂರದಲ್ಲಿದೆ.

ಮಾನಸವನ್ನು ಭೇಟಿಮಾಡಲು ಉತ್ತಮ ಸಮಯ

ಮಾನಸ ಪಟ್ಟಣವು ಬೇಸಿಗೆಕಾಲದಲ್ಲಿ ಬಿಸಿ ಮತ್ತು ಧೂಳಿನ ಹವಾಮಾನವನ್ನು ಹೊಂದಿದೆ. ಮಳೆಗಾಲದ ಸಮಯವು ಬಹಳ ಕಡಿಮೆಯಾಗಿದ್ದು ಅತ್ಯಂತ ಕಡಿಮೆ ಮಳೆಯಿಂದ  ಅಧಿಕ ಆರ್ದ್ರತೆ(Humidity) ಹೊಂದಿರುತ್ತದೆ. ಮಳೆಗಾಲ ಕಳೆದನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮಕ್ಕೆ ಪರಿಪೂರ್ಣ ತಂಪಾದ ಹವಾಮಾನವಿರುತ್ತದೆ. ಇದರ ನಂತರ ಬರುವ ಚಳಿಗಾಲದಲ್ಲಿ ಕಡಿಮೆ ತಾಪಮಾನ ಮತ್ತು ತಣ್ಣನೆಯ ಗಾಳಿಬೀಸುತ್ತಿರುತ್ತದೆ.  ಈ ಸಮಯದಲ್ಲಿ ಪ್ರವಾಸಿಗಳು ಭೇಟಿ ಮಾಡಬಹುದು. 

ಮಾನಸ ಪ್ರಸಿದ್ಧವಾಗಿದೆ

ಮಾನಸ ಹವಾಮಾನ

ಉತ್ತಮ ಸಮಯ ಮಾನಸ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಾನಸ

  • ರಸ್ತೆಯ ಮೂಲಕ
    ಮಾನಸವು ಪಂಜಾಬಿನ ಎಲ್ಲ ಪ್ರಮುಖ ನಗರಗಳಿಂದ ಬಸ್ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಅನೇಕ ರಾಜ್ಯ ಸಾರಿಗೆ ಬಸ್ ನಿರ್ವಾಹಕರು ಬರ್ನಾಲಾ-ಸರ್ದುಲ್‍ಘರ್-ಸಿರ್ಸ ಹೆದ್ದಾರಿಯಲ್ಲಿ ದೈನಂದಿನ ಸೇವೆಗಳನ್ನು ನೀಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಭಟಿಂಡಾ-ಜಿಂದ್-ದೆಹಲಿ ರೈಲು ಮಾರ್ಗದಲ್ಲಿ ಇರುವ ಮಾನಸಕ್ಕೆ ದೆಹಲಿಯಿಂದ ನಿರಂತರವಾಗಿ ರೈಲುಗಳು ಬರುತ್ತವೆ. ಮುಖ್ಯ ಪ್ಯಾಸೆಂಜರ್ ಗಾಡಿಗಳಾದ ನವ ದೆಹಲಿ - ಭಟಿಂಡಾ ಇಂಟರ್ಸಿಟಿ ಎಕ್ಸ್ ಪ್ರೆಸ್, ಫಿರೋಜ್‍ಪೂರ್ - ಮುಂಬೈ ಜನತ ಎಕ್ಸ್ ಪ್ರೆಸ್, ಬಿಕಾನೇರ್ ಗೌಹಾಟಿ ಎಕ್ಸ್ ಪ್ರೆಸ್ ಮತ್ತು ಪಂಜಾಬ್ ಮೈಲ್, ಮಾನಸ ನಿಲ್ದಾಣದಲ್ಲಿ ನಿಲ್ಲುತ್ತವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಾನಸಕ್ಕೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಲೂಧಿಯಾನದಲ್ಲಿರುವ ಸಹ್ನೆವಾಲ್ ವಿಮಾನ ನಿಲ್ದಾಣ. ಅಲ್ಲಿಂದ ಬಸ್ ಅಥವ ಟ್ಯಾಕ್ಸಿಯಲ್ಲಿ ಅಂದಾಜು 2 ಗಂಟೆ 9 ನಿಮಿಷದಲ್ಲಿ ರಸ್ತೆಯ ಮೂಲಕ ತಲುಪಬಹುದು. ಇಂಡಿಯನ್ ಏರ್ಲೈನ್ಸ್, ಜೆಟ್ ಏರ್ವೇಸ್ ಮತ್ತು ಇಂಡಿಗೋ ಇಂತಹ ಎಲ್ಲ ಪ್ರಮುಖ ದೇಶೀಯ ವಿಮಾನಗಳು ಸಾಹ್ನೆವಾಲ್ ವಿಮಾನ ನಿಲ್ದಾಣದಿಂದ ದೇಶಾದ್ಯಂತ ವಿವಿಧ ಸ್ಥಳಗಳಿಗೆ ಪ್ರತಿದಿನ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun