ಖಿರ್ ಗಂಗಾ ಎಂಬುದು ಮನಿಕರನ್ನಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ನಂಬಿಕೆಗಳ ಪ್ರಕಾರ, ಈ ಬಿಸಿ ನೀರಿನ ಬುಗ್ಗೆಯಿಂದ ಬರುವ ಶ್ವೇತ ವರ್ಣದ ನೀರು ಹಲವಾರು ಔಷಧೀಯ ಗುಣಗಳನ್ನು ಹೊಂದಿರುತ್ತದೆಯಂತೆ. ಅರ್ಥಾನುಸಾರ "ಖಿರ್ ಗಂಗಾ" ಎಂದರೆ ಬಿಸಿನೀರಿನ ಬುಗ್ಗೆಯಿಂದ ಬರುವ ಬಿಳಿಯ ನೀರು ಎಂದರ್ಥವಾಗುತ್ತದೆ. ಈ ಬುಗ್ಗೆಯಿಂದ ಚಿಮ್ಮುವ ನೀರು ತನ್ನಲ್ಲಿ ಉಪಸ್ಥಿತವಿರುವ ಗಂಧಕದಿಂದ ಆ ಬಣ್ಣ ಪಡೆಯುತ್ತದೆ.
ಮಂಟಲೈ ಎಂಬ ಸ್ಥಳವು ಖಿರಂಗದಿಂದ 2 ಕಿ.ಮೀ ದೂರದಲ್ಲಿದ್ದು, ತನ್ನಲ್ಲಿರುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಸ್ಥಳವು ಸಹ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ.
ಪುಲ್ಗ ಎಂಬ ಸ್ಥಳವು ಪಾರ್ವತಿ ನದಿಯ ಅತ್ಯದ್ಭುತ ನೋಟವನ್ನು, ಹಿಮಚ್ಛಾಧಿತ ಪರ್ವತಗಳನ್ನು ಮತ್ತು ಖಿರ್ ಗಂಗಾದ ಮೂಲಕ ಸಾಗುವ ಚಾರಣದ ಹಾದಿಗಳ ಭವ್ಯ ನೋಟವನ್ನು ಒದಗಿಸುತ್ತದೆ.