Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಗಳೂರು » ಆಕರ್ಷಣೆಗಳು » ಮಂಗಳಾದೇವಿ ದೇವಸ್ಥಾನ

ಮಂಗಳಾದೇವಿ ದೇವಸ್ಥಾನ, ಮಂಗಳೂರು

5

ಮಂಗಳೂರಿನಿಂದ ಮೂರು ಕಿ.ಮೀ. ದೂರದಲ್ಲಿರುವ ಬೋಳಾರ ಎಂಬಲ್ಲಿ ಮಂಗಳಾದೇವಿ ದೇವಾಲಯವಿದೆ. ಈ ದೇವಾಲಯವು ಹಲವು ಬಂದರುಗಳಿಂದ ಸುತ್ತುವರಿಯಲ್ಪಟ್ಟಿದೆ. ಮಂಗಳೂರಿನ ಹೆಸರಿನ ಹಿಂದೆ ದೇವಾಲಯಕ್ಕೆ ಸಂಬಂಧಿಸಿದ ಹೆಸರಿದೆ. ಅಂದರೆ ಮಂಗಳೂರು ಮಂಗಳ ನಗರವಾಗಿದೆ ಎಂಬ ಅರ್ಥ ಇದೆ. ಈ ದೇವಾಲಯವು 9ನೇ ಶತಮಾನದಲ್ಲಿ ನಿರ್ಮಾಣಗೊಂಡದ್ದಾಗಿದೆ.

ತಮಿಳುನಾಡನ್ನು ಆಳುತ್ತಿದ್ದ ಅರಸ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದ. ದೇವಿ ಮಂಗಳಾದೇವಿ ದೇವಾಲಯದ ಪ್ರಮುಖ ದೇವತೆ. ನವರಾತ್ರಿ ಸಂದರ್ಭದಲ್ಲಿ ಇಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುತ್ತದೆ. ನವರಾತ್ರಿ ಉತ್ಸವದ ಒಂಬತ್ತನೇ ದಿನ ಬೃಹತ್‌ ರಥೋತ್ಸವ ಇಲ್ಲಿ ನಡೆಯುತ್ತದೆ. ದೊಡ್ಡ ಮೆರವಣಿಗೆ ಈ ಸಂದರ್ಭದಲ್ಲಿ ನಡೆಯುತ್ತದೆ. ಬೃಹತ್‌ ಮೆರವಣಿಗೆಯಲ್ಲಿ ದೇವಿಯನ್ನು ಹೊತ್ತು ಸಾಗುವ ದೃಶ್ಯ ಮನಮೋಹಕವಾಗಿರುತ್ತದೆ. ಉತ್ತಮ ಕಾಲಕ್ಕಾಗಿ ಈ ಸಂದರ್ಭದಲ್ಲಿ ದೇವಿಯನ್ನು ಪ್ರಾರ್ಥಿಸಲಾಗುತ್ತದೆ.

ಈ ದೇವಾಲಯದಲ್ಲಿ ಆಚರಣೆಯಾಗುವ ಇನ್ನೊಂದು ದೊಡ್ಡ ಹಬ್ಬ ಗಣೇಶೋತ್ಸವ. ಮಂಗಳೂರು ನಗರ ಬಸ್‌ ನಿಲ್ದಾಣದಿಂದ ಈ ದೇವಾಲಯಕ್ಕೆ ಅತ್ಯಂತ ಸುಲಭವಾಗಿ ಬಸ್‌ ಮೂಲಕ ತೆರಳಬಹುದು. ಈ ದೇವಾಲಯ ಪ್ರಮುಖವಾಗಿ ಬಾಲೆಯರಿಗೆ ಪ್ರಮುಖವಾಗಿದೆ. ಮಂಗಳ ಪಾರ್ವತಿ ವೃತ ದೇವಾಲಯದ ಪ್ರಮುಖ ವೃತಗಳಲ್ಲಿ ಒಂದು. ಇಲ್ಲಿ ಮಾತ್ರ ಇದನ್ನು ಆಚರಿಸಲಾಗುತ್ತದೆ. ಕುವರಿಯರು ಇಲ್ಲಿ ಬಂದು ಈ ವೃತ ಮಾಡಿದರೆ ಉತ್ತಮ ಪತಿ ಸಿಕ್ಕು, ಜೀವನ ಅತ್ಯಂತ ಸುಗಮವಾಗಿ ಸಾಗುತ್ತದೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu