ಮಂಡಿಯ ಸ್ಥಳೀಯ ಆಸ್ಪತ್ರೆ ಎದುರು ಸಿದ್ದ ಗಣಪತಿ ದೇವಾಲಯವಿದೆ. ಇದೊಂದು ಜನಪ್ರಿಯ ದೇಗುಲ. ಇದು ಹಿಂದು ದೇವರಾದ ಶಿವನ ಪುತ್ರ ಗಣಪತಿಗೆ ಮೀಸಲಾದ ಮಂದಿರ. ಇದನ್ನು ಮಂಡಿಯ ರಾಜಾ ಸಿದ್ಧಸೇನ ನಿರ್ಮಿಸಿದ್ದಾನೆ. ದೇವಾಲಯದ ಹಿಂದಿರುವ ನಂಬಿಕೆ ಪ್ರಕಾರ, ರಾಜ ಧ್ಯಾನದ ಸಾಧನೆಯನ್ನು ಈ ದೇಗುಲದಲ್ಲಿ ಮಾಡುತ್ತಿದ್ದ ಎನ್ನಲಾಗಿದೆ.