ಹಿಂದೂ ಧರ್ಮೀಯರ ಪಾಲಿಗೆ ಶಿಕಾರಿ ದೇವಿ ದೇವಾಲಯ ಅತ್ಯಂತ ಪವಿತ್ರ ತಾಣ. ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯಲ್ಲಿರುವ ಈ ಸ್ಥಳ ಸಮುದ್ರ ಮಟ್ಟದಿಂದ 2850 ಮೀಟರ್ ಎತ್ತರದಲ್ಲಿದೆ. ಇದೊಂದು ಛಾವಣಿ ಇಲ್ಲದ ದೇಗುಲವಾಗಿದ್ದು, ಶಿಕಾರಿ ದೇವಿ ತಪ್ಪಲಿನಲ್ಲಿದೆ.
ಪುರಾಣಗಳ ಪ್ರಕಾರ, ದೇವಾಲಯಕ್ಕೆ ಛಾವಣಿ ನಿರ್ಮಿಸುವ ಎಲ್ಲಾ ಸಂದರ್ಭದಲ್ಲೂ ಅದು ವಿಫಲವಾಗುತ್ತಿತ್ತು. ಇದು ಶಿಕಾರಿ ದೇವಿಗೆ ಮೀಸಲಾಗಿದ್ದ ದೇವಾಲಯವಾಗಿದ್ದು, ನಂತರ ಹಾಗೆಯೇ ಬಿಡಲಾಗಿದೆ. ಜಂಜೇಲಿಯಿಂದ ಇದು 15 ಕಿ.ಮೀ. ದೂರದಲ್ಲಿದೆ. ಶಿಕಾರಿ ದೇವಿ ದೇವಾಲಯಕ್ಕೆ ಬರುವವರು ಇಲ್ಲಿಗೆ ಮುಖ್ಯ ಮೂಲದಿಂದ ಟ್ರೆಕ್ಕಿಂಗ್ ಮೂಲಕವೇ ಆಗಮಿಸಬೇಕು.