ಮಂಡಿ ಜಿಲ್ಲೆಯ ಚಂಡಿಯಿಂದ 13 ಕಿ.ಮೀ. ದೂರದಲ್ಲಿದೆ ಮಮ್ಲೇಶ್ವರ ದೇವಸ್ಥಾನ. ಶಿವನ ದೇಗುಲ ಇದಾಗಿದೆ. ಕಲ್ಲಿನಿಂದ ಕೆತ್ತಿದ ಸುಂದರ ಶಿವನ ವಿಗ್ರಹ ಇಲ್ಲಿ ಪೂಜೆಗೆ ಒಳಗಾಗುತ್ತದೆ. ಆಕರ್ಷಕ ವಾಸ್ತುಶಿಲ್ಪ ಬಳಸಿ ದೇವಾಲಯ ನಿರ್ಮಿಸಲಾಗಿದೆ. ಆಕರ್ಷಕ ಕೆತ್ತನೆ ಒಳಗೊಂಡ ಮರದ ಕಂಬ ಇಲ್ಲಿದೆ. ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಆರು ಅಡಿ ಎತ್ತರವಾದ ಡ್ರಮ್ ಹಾಗೂ ಉದ್ದವಾದ ಹಸಿರು ಗೋಧಿ ತೆನೆ. ಇದು ಕೇವಲ 250 ಗ್ರಾಂ ಭಾರವಾಗಿದೆ. ಪುರಾಣದ ಪ್ರಕಾರ, ಈ ದೇವಾಲಯವನ್ನು ಪಾಂಡವರು ತಾವು ಗಡಿಪಾರಾಗಿದ್ದ ಸಂದರ್ಭದಲ್ಲಿ ನಿರ್ಮಿಸಿದ್ದರು.