ಸಮುದ್ರ ಮಟ್ಟದಿಂದ 1700 ಮೀಟರ್ ಎತ್ತರದಲ್ಲಿದೆ ಈ ಕುಂತ ಭಾಯೋಗ್ ಕೆರೆ. ಇದು ರೇವಾಲ್ಸರ ಪಟ್ಟಣದಲ್ಲಿದೆ. ಇದು ರೇವಾಲ್ಸರ ಕೆರೆ ಹಾಗೂ ಆಶ್ರಮದ ಸಮೀಪವೇ ಇದೆ. ದೊಡ್ಡ ದೊಡ್ಡ ಬೆಟ್ಟಗಳ ನಡುವೆ ಈ ಕೆರೆ ಮನಮೋಹಕವಾಗಿ ಕಾಣುತ್ತದೆ. ಕೆರೆಯ ಆಳ 12 ರಿಂದ 15 ಮೀಟರ್ವರೆಗೂ ಇದೆ. ಇಲ್ಲಿಯೇ ಚಿಕ್ಕದೊಂದು ಝೂ ಕೂಡ ಇದೆ. ಸಾಕಷ್ಟು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ.
ಇತರೆ ಆರು ಕೆರೆಗಳಂತೆ ಈ ಕೆರೆ ಕೂಡ ಭಾರತೀಯ ಮಹಾಗ್ರಂಥ ಮಹಾಭಾರತದಲ್ಲಿ ಪ್ರಸ್ತಾಪವಾಗಿದೆ. ಪುರಾಣದ ಪ್ರಕಾರ, ಅರಗಿನ ಮನೆಯಿಂದ ಬಚಾವಾಗಿ ತೆರಳುವಾಗ ಪಾಂಡವರು ಇದೇ ಕೆರೆ ಮಾರ್ಗವಾಗಿ ತೆರಳಿದ್ದರಂತೆ.