ಕಾಮಾಕ್ಷಾ ದೇವಿಗೆ ಮುಡಿಪಾಗಿರುವ ದೇಗುಲ ಈ ಕಾಮಾಕ್ಷಾ ದೇವಿ ದೇವಾಲಯ. ಇಲ್ಲಿ ದೇವಿ ದುರ್ಗೆಯ ಆರಾಧನೆ ಆಗುತ್ತದೆ. ಮಂಡಿ ಜಿಲ್ಲೆಯ ಕಾವೋ ಹಳ್ಳಿಗರ ಖಾಯಂ ಧಾರ್ಮಿಕ ತಾಣ ಇದಾಗಿದೆ. ಪುರಾಣಗಳ ಪ್ರಕಾರ, ಅಸುರ ಮಹಿಷಾಸುರನನ್ನು ದೇವಿ ದುರ್ಗೆ ಸಾಯಿಸಿದ್ದು ಇದೇ ಸ್ಥಳದಲ್ಲಿ. ಪ್ರತಿ ವರ್ಷ ನಡೆಯುವ ನವರಾತ್ರಿ ಉತ್ಸವ ಸಂದರ್ಭದಲ್ಲಿ ಇಲ್ಲಿ ಕೋಣಗಳ ಬಲಿ ನಡೆಯುತ್ತದೆ. ಈ ದೇಗುಲವನ್ನು ಪಾರಂಪರಿಕ ಪಗೋಡಾ ಶೈಲಿಯ ವಾಸ್ತುಶಿಲ್ಪ ಬಳಸಿ ನಿರ್ಮಿಸಲಾಗಿದೆ. ಆಕರ್ಷಕ ಚಿತ್ರಕಲೆ, ಮರದ ಕೆತ್ತನೆ ಗಮನ ಸೆಳೆಯುತ್ತವೆ. ಕರಸೋಗದಿಂದ ಇದು ಕೇವಲ ಏಳು ಕಿ.ಮೀ. ದೂರದಲ್ಲಿದೆ. ಸುಲಭವಾಗಿ ತಲುಪಬಹುದಾಗಿದೆ.