ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಹಿಮಾಚಲ ದರ್ಶನ ಛಾಯಾಚಿತ್ರ ಗ್ಯಾಲರಿ ಸಿಗುತ್ತದೆ. ಮಂಡಿಯಿಂದ ನಾಲ್ಕು ಕಿ.ಮೀ. ದೂರದಲ್ಲಿದೆ. ಹಿಮಾಚಲ ಪ್ರದೇಶದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪಾರಂಪರಿಕತೆ ಹಾಗೂ ಶ್ರೀಮಂತಿಕೆಯನ್ನು ಚಿತ್ರ ರೂಪದಲ್ಲಿ ಪ್ರದರ್ಶಿಸುವ ಕಾರ್ಯವನ್ನು ಈ ಗ್ಯಾಲರಿ ಮಾಡುತ್ತಿದೆ. ಇಲ್ಲಿನ ಐತಿಹಾಸಿಕ ಕ್ಷಣಗಳು, ನದಿಗಳು, ಕಣಿವೆಗಳು, ಪಕ್ಷಿಗಳು, ದೇವಾಲಯಗಳು, ಬೆಟ್ಟಗಳು, ಪ್ರಾಣಿಗಳು, ಜನರು, ಶಿಲ್ಪಗಳು ಸೇರಿದಂತೆ ರಾಜ್ಯವನ್ನು ಪರಿಚಯಿಸುವ ಆಕರ್ಷಕ ಛಾಯಾಚಿತ್ರಗಳ ಸಂಗ್ರಹ ಇಲ್ಲಿದೆ.