ಗದ್ದಾ ಗುಸೈನಿಯು ಸುಂದರ ಕಣಿವೆ ಪ್ರದೇಶವಾಗಿದ್ದು, ಮಂಡೋಪುರ ಕೋಟೆಯ ಸಮೀಪವಿದೆ. ಮಂಡಿಯನ್ನು ಆಳಿದ ಅರಸರು ಇದನ್ನು ನಿರ್ಮಿಸಿದ್ದರು. ಈ ಕೋಟೆಯು ತೀಕ್ಷ್ಣ ಬಾಣ ಹಾಗೂ ಇತರೆ ಆಯುಧಗಳ ಏಟಿಗೆ ಬಗ್ಗದ ರೀತಿಯಲ್ಲಿ ಶಕ್ತಿಯುತವಾಗಿ ನಿರ್ಮಿತವಾಗಿದೆ. ಇಲ್ಲಿನ ಅರಸರ ರಾಜ್ಯಭಾರಕ್ಕೆ ಮುನ್ನ ಇದನ್ನು ನಿರ್ಮಿಸಲಾಗಿದೆ. ಅಲ್ಲದೆ, ಈ ಕೋಟೆಯು ರಾಜ್ಯದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಕಿಡಿಗೇಡಿಗಳನ್ನು ಶಿಕ್ಷಿಸುವ ತಾಣವೂ ಆಗಿತ್ತು. ಇದೆ ಕಣಿವೆ ಭಾಗದಲ್ಲಿ ತುಂಗಾಸಿ ಕೋಟೆಯು ಕೂಡ ಇದೆ.