ಮಂಡಿಯ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಬರೋಟ ಕೂಡ ಒಂದು. ಇದು ದಟ್ಟ ಅರಣ್ಯದಿಂದ ಆವೃತ್ತವಾಗಿದೆ. ಸಮುದ್ರ ಮಟ್ಟದಿಂದ 2600 ಮೀಟರ್ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಜೋಗಿಂದರ್ ನಗರ್ ಹೈಡಲ್ ವಿದ್ಯುತ್ ಯೋಜನೆ ಆಗಿದೆ. ಇದು ಸಿಹಿನೀರಲ್ಲಿ ಬಾಳುವ ಒಂದು ಬಗೆಯ ಮೀನಿನ ಜಾತಿಯ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಇದಲ್ಲದೇ ಮೀನುಗಾರಿಕೆಗೆ ಇದು ಪ್ರಶಸ್ತ ತಾಣ. ಪ್ರವಾಸಿಗರಿಗೆ ಮೀನುಗಾರಿಕೆ ಮಾಡುವುದು ಹಾಗೂ ಟ್ರೆಕ್ಕಿಂಗ್ಗೆ ಅಗತ್ಯ ಅನುಕೂಲಗಳು ಇಲ್ಲಿವೆ. ಇಲ್ಲಿಯೆ ಮಂಡಿ ಅರಸರ ಬೇಸಿಗೆ ಪ್ಯಾಲೇಸ್ ಕೂಡ ಇದೆ. ಇನ್ನೊಂದು ಆಕರ್ಷಣೆ ನರಗು ವನ್ಯಜೀವಿ ಧಾಮ. ಈ ಮೂಲಕ ಇದೊಂದು ವಿಶಿಷ್ಟ ಪಿಕ್ನಿಕ್ ತಾಣವಾಗಿ ಜನಪ್ರಿಯವಾಗಿದೆ.