ಬಾಹ್ಲ್ ಕಣಿವೆಯು ಸುಂದರನಗರ ಕಣಿವೆ ಪ್ರದೇಶದಲ್ಲಿ ಬರುತ್ತದೆ. ಸಮುದ್ರ ಮಟ್ಟದಿಂದ 800 ಮೀಟರ್ ಎತ್ತರದಲ್ಲಿದೆ. ಇದು ಶಿಮ್ಲಾ ವಿಭಾಗ ಹಾಗೂ ಶಿವಾಲಿಕ್ ಬೆಟ್ಟಗಳ ನಡುವೆ ಇದೆ. ಇದೊಂದು ಆಕರ್ಷಕ ತಾಣವಾಗಿದೆ. ಸುಕೇತಿ ನದಿ ಈ ಮಾರ್ಗವಾಗಿಯೇ ಹರಿದು ಹೋಗಿದೆ. ಗೋದಿ, ಶುಂಠಿ, ಕಬ್ಬು ಮತ್ತು ಜೋಳದ ಬೆಳೆಯನ್ನು ಅಪಾರ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ನಿವಾಸಿಗಳು ಇದರೊಂದಿಗೆ ಹೈನುಗಾರಿಕೆ, ಮಿಶ್ರಣ ವ್ಯವಸಾಯ, ತೋಟಗಾರಿಕೆ ಹಾಗೂ ಪ್ರಾಣಿ ಸಾಕಾಣಿಕೆ ಕಾರ್ಯವನ್ನೂ ಮಾಡುತ್ತಾರೆ.