ಇದು ಆಕರ್ಷಕ ಪಟ್ಟಣ. ಮನಾಲಿಯಿಂದ ಕೇವಲ ಮೂರು ಕಿ.ಮೀ. ದೂರದಲ್ಲಿದೆ. ಹಳೆಯ ಪ್ರವಾಸಿ ಮಂದಿರ, ದೇವಾಲಯಗಳು, ಸ್ಮಾರಕಗಳು ಮತ್ತು ತೋಟಗಳಿಗೆ ಹೆಸರಾಗಿದೆ. ಮಂಗಲಿಗಾತ್ರ ಕೋಟೆ, ಮನು ಮಹರ್ಷಿ ದೇಗುಲ ಇಲ್ಲಿನ ಇನ್ನಿತರ ಆಕರ್ಷಣೆಗಳು. ಮೇನಿಂದ ಅಕ್ಟೋಬರ್ ನಡುವಿನ ಕಾಲ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿಗೆ ಬರುವ ಪ್ರವಾಸಿಗರು ಇದರೊಂದಿಗೆ ಹಡಿಂಬಾ ದೇಗುಲ ಹಾಗೂ ಸೋಲಾಂಗ ಕಣಿವೆ ದರ್ಶನವನ್ನೂ ಮಾಡಿ ತೆರಳಬಹುದು. ಇವೆರಡೂ ಇದಕ್ಕೆ ಸಮೀಪದಲ್ಲಿರುವ ಇನ್ನಿತರ ಆಕರ್ಷಕ ತಾಣಗಳು.