ಹಿಮಾಚಲ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಚ್ಟಿಡಿಸಿ) ನಿರ್ವಹಣೆಯಲ್ಲಿದೆ ಈ ಕ್ಲಬ್ ಹೌಸ್. ಮನಾಲಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರೂ ಇಲ್ಲಿನ ಹೊರಾಂಗಣ ಹಾಗೂ ಒಳಾಂಗಣ ಕ್ರೀಡೆಯ ಮುದ ಸವಿಯದೇ ಹಿಂದಿರುಗುವುದಿಲ್ಲ.
ಇಲ್ಲಿ ತಲುಪುವುದು ಕೂಡ ಅತ್ಯಂತ ಸುಗಮ. ಬಸ್ ಅಥವಾ ಟ್ಯಾಕ್ಸಿ ಮೂಲಕ ಆರಾಮವಾಗಿ ತಲುಪಬಹುದು. ಇಲ್ಲಿ ಬಿಲಿಯರ್ಡ್ ಕೋಣೆ, ಗ್ರಂಥಾಲಯ, ಸಭಾಂಗಣ, ಕೇರಂ ಬೋರ್ಡ್ ಕೋಣೆ, ರೋಲರ್ ಸ್ಕೇಟಿಂಗ್ ರಿಂಗ್, ಬಾರ್, ರೆಸ್ಟೊರೆಂಟ್ ಹಾಗೂ ಮನರಂಜನಾ ಸೌಲಭ್ಯ ಸೇರಿದಂತೆ ಹಲವು ಅಗತ್ಯ ಸೌಲಭ್ಯ ಇಲ್ಲಿದೆ. ಇದರಿಂದ ಪ್ರವಾಸಿಗರಿಗೆ ಈ ತಾಣ ಬೋರೆನಿಸದು.