ಮಲ್ಶೆಜ್ ಘಾಟ್ ಸಹ್ಯಾದ್ರಿ ಶ್ರೇಣಿಗಳಲ್ಲಿ ನೆಲೆಗೊಂಡಿರುವ ಒಂದು ಬೆಟ್ಟ ಪ್ರಾಂತ್ಯವಾಗಿದ್ದು, ಚಾರಣಿಗರಿಗೆ ಉತ್ತಮ ಚಾರಣದ ಅವಕಾಶವನ್ನು ಒದಗಿಸುತ್ತದೆ. ಇಲ್ಲಿನ ಚಾರಣವು ನಿಮ್ಮನ್ನು ಪ್ರಕೃತಿ ಮಾತೆಯ ಸನಿಹಕ್ಕೆ ಕೊಂಡೊಯ್ಯುತ್ತದೆ. ಇಲ್ಲಿನ ಸೌಂದರ್ಯವನ್ನು ಸವಿಯಲು ಚಾರಣಕ್ಕಿಂತ ಮಿಗಿಲಾದ ಮತ್ತೊಂದು ಚಟುವಟಿಕೆ ನಿಮಗೆ ದೊರೆಯಲಾರದು ಎಂದೆ ಹೇಳಬಹುದು.
ಮಲ್ಶೆಜ್ ಘಾಟ್ನಲ್ಲಿ ಹಲವಾರು ಚಾರಣದ ಮಾರ್ಗಗಳಿವೆ. ಇವುಗಳಲ್ಲಿ ಹವ್ಯಾಸಿಗಳಿಗೆ, ಹೊಸಬರಿಗೆ ಮತ್ತು ವೃತ್ತಿಪರ ಚಾರಣಿಗರಿಗೆ ಎಂದು ಹೆಸರಿಸ ಬಹುದಾದಂತಹ ಹಲವಾರು ಚಾರಣದ ಮಾರ್ಗಗಳು ಇವೆ. ಈ ಪ್ರಾಂತ್ಯದಲ್ಲಿಯೆ ಡರ್ಕೊಬ ಬೆಟ್ಟಗಳು ಅತ್ಯಂತ ಎತ್ತರದ ಬೆಟ್ಟಗಳಾಗಿವೆ. ಅಜೊಬ ಬೆಟ್ಟಗಳು, ಜೀವ್ಧಾನ್ ಚಾವಂದ್ ಕೋಟೆ ಮತ್ತು ನಾನೆ ಘಾಟ್ಗಳು ಇಲ್ಲಿರುವ ಇನ್ನಿತರ ಚಾರಣದ ಸ್ಥಳಗಳಾಗಿವೆ.
ಪ್ರವಾಸಿಗರು ಇಲ್ಲಿರುವ ಒಝಾರ್ ಮತ್ತು ಲೆನ್ಯಾದ್ರಿ ಮಾರ್ಗಗಳ ಮೂಲಕ ಧಾರ್ಮಿಕ ಸ್ಥಳಗಳಿಗೆ ಚಾರಣ ಮಾಡಬಹುದು. ಈ ಎರಡು ಸ್ಥಳಗಳು ಗಣಪತಿಯ ದೇವಾಲಯಗಳಿಗೆ ಹೆಸರುವಾಸಿಯಾಗಿವೆ.