ಬೊಂಗೊರಿ ಮಜುಲಿಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಪ್ರಸಿದ್ಧ ಸ್ಥಳಗಳಲ್ಲಿ ಒಂದು.ಅಸ್ಸಾಂ ಸುಮಾರು 600 ವರ್ಷಗಳ ಕಾಲ ಆಡಳಿತ ನಡೆಸಿದ ಅಹೋಮ್ ರಾಜವಂಶದ ಶೀಮಂತ ಪರಂಪರೆಯನ್ನು ಹೊಂದಿದೆ.ಬೊಂಗೊರಿ ಈ ಸಮೃದ್ದ ಪರಂಪರೆಯ ಬಗ್ಗೆ ಮಾಹಿತಿ ಹೊಂದಿರುವ ಅನೇಕ ಸತ್ರಗಳನ್ನು ಒಳಗೊಂಡಿದೆ.
ಇಲ್ಲಿನ ಜನರು ತಮ್ಮ ಪೂರ್ವಜರು ಪ್ರಕೃತಿಯ ಸಂಪೂರ್ಣ ಸಾಮರಸ್ಯದೊಂದಿಗೆ ಹೇಗೆ ಜೀವಿಸುತ್ತಿದ್ದರೋ ಹಾಗೆಯೇ ಇಂದಿಗೂ ಕೂಡ ಯಾವುದೇ ನವೀಕರಣವಿಲ್ಲದೆ ಜೀವಿಸುತ್ತಾ ಬರುತ್ತಿದ್ದಾರೆ ಎಂಬುದು ಪ್ರವಾಸಿಗರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.
ಅಸ್ಸಾಂ ಪ್ರವಾಸ ಕೈಗೊಂಡಾಗ ಶಾಂತಿ ಮತ್ತು ಪ್ರಶಾಂತತೆ ಬಯಸುವವರಿಗೆ ಈ ತಾಣ ಸೂಕ್ತವಾಗಿದೆ.