ಮನೈಯ ದೇವಿಯ ದೇವಾಲಯದಲ್ಲಿ ಮನೈಯ ದೇವಿಯ ವಿಗ್ರಹವಿದೆ. ಈ ದೇವತೆ ಚಂಡೇಲ ವಂಶದ ರಕ್ಷಕ ದೇವತೆ ಎಂದು ಹೇಳಲಾಗುತ್ತದೆ. ಇದು ಮದನ ಸಾಗರ ಸರೋವರದ ದಂಡೆಯಲ್ಲಿದೆ. ಇಲ್ಲಿ ಮುಸ್ಲಿಂ ಸಂತ ಪೀರ್ ಮುಬಾರಕ್ ಷಾನ ಸ್ಮಾರಕವಿದೆ. ಈತ ಅರೇಬಿಯಾದಿಂದ ಕ್ರಿ.ಶ 1252ರಲ್ಲಿ ಇಲ್ಲಿಗೆ ಬಂದ. ಈ ದೇವಾಲಯದ ವಿಶೇಷ ಲಕ್ಷಣವೆಂದರೆ ಇಲ್ಲಿ 18 ಅಡಿ ಎತ್ತರ ಮತ್ತು 1.75 ಅಡಿ ಅಗಲದ ಗ್ರ್ಯಾನೆಟ್ ಸ್ಥಂಭವಿದೆ.