Search
  • Follow NativePlanet
Share

ಮಾಹೆ - ಅರಬ್ಬೀ ಸಮುದ್ರದ ಮುನ್ನುಡಿ

11

ದಕ್ಷಿಣ ಭಾರತದ ಪಾಂಡಿಚೆರಿಯಲ್ಲಿ ಕಂಡುಬರುವ ಒಂದು ಪ್ರವಾಸಿ ಸ್ಥಳ ಮಾಹೆ. ಇದು ಕೇವಲ 9 ಚದರ ಕಿ.ಮೀ ವ್ಯಾಪ್ತಿಯನ್ನು ಮಾತ್ರ ಹೊಂದಿದ್ದು, ಮೂರು ಕಡೆ ಕೇರಳದ ಗಡಿಭಾಗದಿಂದ ಸುತ್ತುವರಿದಿದೆ. ಹೀಗಾಗಿ ಇಲ್ಲಿನ ಭಾಷೆ ಮತ್ತು ಸಂಪ್ರದಾಯದಲ್ಲಿ ಕೇರಳದ ಪಡಿಯಚ್ಚು ಕಾಣಬಹುದು. ಮಾಹೆಯಲ್ಲಿ ಸುಮಾರು 35 ಸಾವಿರ ಜನ ವಾಸವಿದ್ದಾರೆ. ಇಲ್ಲಿನ ಸಾಕ್ಷರತೆ ಪ್ರಮಾಣ ಶೇ.98.35. ಇಡೀ ದೇಶದಲ್ಲೇ ಅತ್ಯಂತ ಸಾಕ್ಷರರ ನಾಡು ಇದಾಗಿದೆ. 1954 ರಲ್ಲಿ ಈ ನಗರ ಫ್ರೆಂಚರ ಆಡಳಿತದಲ್ಲಿತ್ತು. ಹೀಗಾಗಿ ಇಲ್ಲಿನ ವಾಸ್ತುಶಿಲ್ಪದಲ್ಲಿ ಮತ್ತು ಸಂಪ್ರದಾಯಗಳಲ್ಲಿ ಫ್ರೆಂಚ್‌ ಪ್ರಭಾವವನ್ನು ಕಾಣಬಹುದು. ಇದಕ್ಕೆ ಸೂಕ್ತ ಉದಾಹರಣೆಯೆಂದರೆ 1855 ರಲ್ಲಿ ನಿರ್ಮಿಸಿದ ಗವರ್ನಮೆಂಟ್‌ ಹೌಸ್.

ಪಟ್ಟಣದ ಫ್ರೆಂಚ್‌ ಮೂಲ

ಬರ್ಟಾಂಡ್‌ ಫ್ರಾಂಕೋಯ್ಸ್‌ ಮಾಹೆ ಡೆ ಲಾ ಬೌರ್ಡನಿಸ್‌, ಈತ ಭಾರತದಲ್ಲಿ ಫ್ರೆಂಚ್‌ ವಸಾಹತು ಕಾಲದಲ್ಲಿದ್ದ ಪ್ರಮುಖ ವ್ಯಕ್ತಿ. ಈ ಪಟ್ಟಣಕ್ಕೆ ಅವನ ಹೆಸರಿರುವಂತೆ ಹಲವು ಕುರುಹುಗಳೂ ಇವೆ. ಪಟ್ಟಣದ ಹೆಸರಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಕಥೆಗಳಿವೆ. ಅವುಗಳಲ್ಲಿ ಒಂದು ಫ್ರೆಂಚ್‌ ವ್ಯಕ್ತಿಯ ಹೆಸರನ್ನು ಈ ಪಟ್ಟಣಕ್ಕೆ ಇಡಲಾಗಿದೆ ಎಂಬುದಾಗಿದ್ದರೆ, ಇನ್ನೊಂದು ಈಗಾಗಲೇ ಕೌಂಟ್‌ ಡೆ ಲಾ ಬೌರ್ಡನಿಸ್‌, ಮಾಹೆ ಹೆಸರನ್ನೇ ತನ್ನ ಹೆಸರಿನೊಂದಿಗೆ ಸೇರಿಸಿಕೊಂಡ ಎಂದೂ ಹೇಳಲಾಗುತ್ತದೆ.

ಮಾಹೆ ಸುತ್ತಮುತ್ತ ಪ್ರವಾಸಿ ತಾಣಗಳು

ಸುತ್ತಮುತ್ತಲಿನ ಕ್ರಿಶ್ಚಿಯನ್ನರಿಗೆ ಅತ್ಯಂತ ಪವಿತ್ರ ಧಾರ್ಮಿಕ ತಾಣವೆಂದರೆ ಮಾಹೆ ಪಳ್ಳಿ ಅಥವಾ ಚರ್ಚ್‌. ಮಾಹೆ ಬೋಟ್‌ ಹೌಸ್‌ ಕೂಡಾ ಪ್ರವಾಸಿಗರಿಗೆ ಅತ್ಯಂತ ಇಷ್ಟವಾಗುವ ಪ್ರದೇಶ. ಇಲ್ಲಿ ಸ್ಪೀಡ್‌ಬೋಟ್‌ಗಳು, ಪೆಡಲ್‌ ಬೋಟ್‌ಗಳು ಹೀಗೆ ಮುಂತಾದವುಗಳನ್ನು ಕಾಣಬಹುದು. ಈ ಸುಂದರ ಪಟ್ಟಣದಲ್ಲಿ ಪ್ರವಾಸಿಗರನ್ನು ವರ್ಷದ ಯಾವುದೇ ಸಮಯದಲ್ಲೂ ನೋಡಬಹುದು.

ಮಾಹೆ ಪ್ರಯಾಣಕ್ಕೆ ಸೂಕ್ತ ಕಾಲ

ಮಾಹೆಗೆ ಪ್ರಯಾಣ ಕೈಗೊಳ್ಳಲು ಸೂಕ್ತ ಕಾಲವೆಂದರೆ ಅಕ್ಟೋಬರಿನಿಂದ ಮಾರ್ಚ್‌ನ ಅವಧಿ.

ಮಾಹೆಗೆ ಹೋಗುವುದು ಹೇಗೆ

ರೈಲು, ರಸ್ತೆ ಮತ್ತು ವಿಮಾನ ಸಾರಿಗೆ ಮೂಲಕ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ಸಂಪರ್ಕವಿದೆ.

ಮಾಹೆ ಪ್ರಸಿದ್ಧವಾಗಿದೆ

ಮಾಹೆ ಹವಾಮಾನ

ಉತ್ತಮ ಸಮಯ ಮಾಹೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಾಹೆ

  • ರಸ್ತೆಯ ಮೂಲಕ
    ಮಾಹೆಗೆ ಸುಲಭ ಬಸ್‌ ಸಂಪರ್ಕವಿದೆ. ಖಾಸಗಿ ಮತ್ತು ಕೇರಳ ರಾಜ್ಯ ಸರ್ಕಾರಿ ಸಾರಿಗೆ ಬಸ್‌ಗಳು ಇಲ್ಲಿಗೆ ಸಂಪರ್ಕವನ್ನು ಹೊಂದಿವೆ. ಕೋಳಿಕ್ಕೋಡ್‌, ತಲಸ್ಸೆರಿ, ಕಣ್ಣೂರು ಮತ್ತು ಪಯ್ಯನೂರಿನಿಂದ ಮಾಹೆಗೆ ನಿತ್ಯವೂ ಹಲವು ಬಸ್‌ಗಳು ಪ್ರಯಾಣಿಸುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಾಹೆ ರೈಲ್ವೆ ನಿಲ್ದಾಣದಲ್ಲಿ ಕೆಲವೇ ಸ್ಥಳೀಯ ರೈಲುಗಳು ಮತ್ತು ಎಕ್ಸ್‌ಪ್ರೆಸ್‌ ರೈಲುಗಳು ನಿಲ್ಲುತ್ತವೆ. ಸಮೀಪದ ಪ್ರಮುಖ ರೈಲ್ವೆ ನಿಲ್ದಾಣವೆಂದರೆ (ದೂರದ ರೈಲುಗಳು ನಿಲ್ಲುವ ಸ್ಟೇಷನ್‌) 10 ಕಿ.ಮೀ ದೂರದಲ್ಲಿರುವ ತಲಸ್ಸೆರಿ. ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಇಲ್ಲಿಂದ ನೇರ ಸಂಪರ್ಕವಿದೆ. ತಲಸ್ಸೆರಿಯಿಂದ ಟ್ಯಾಕ್ಸಿಯ ಮೂಲಕ ಸುಮಾರು 200 ರೂ. ನಲ್ಲಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಾಹೆಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (80 ಕಿ.ಮೀ ದೂರದಲ್ಲಿ). ಭಾರತದ ಎಲ್ಲಾ ಪ್ರಮುಖ ನಗರಗಳಿಗೂ ಇಲ್ಲಿಂದ ಸಂಪರ್ಕವಿದೆ. ಕ್ಯಾಲಿಕಟ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಹೆಗೆ ಟ್ಯಾಕ್ಸಿ ಪ್ರಯಾಣ ದರವು ಸುಮಾರು 1,750 ರೂ. ಆಗಲಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat