ಜಾಂಜರ್ ಪುರ್ ಹಿಮಾಲಯ ಪರ್ವತದ ತಪ್ಪಲಿನಲ್ಲಿ ನೆಲೆಗೊಂಡಿರುವ ಒಂದು ಹಳ್ಳಿಯಾಗಿದೆ. ಇದು ಇಲ್ಲಿನ ವನ್ಯ ಮತ್ತು ಪ್ರಾಣಿ ಸಂಪತ್ತಿಗೆ ಹೆಸರುವಾಸಿಯಾಗಿದೆ. ಜಾಂಜರ್ ಪುರದಲ್ಲಿ ಇಂದ್ರ ಪೂಜಾ ಮತ್ತು ದುರ್ಗಾಪೂಜಾಗಳನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಿಗೆ ಹೋಲಿಕೆಯು ಸಹ ಇತರೆಡೆಗಳಲ್ಲಿ ಕಂಡು ಬರುವುದಿಲ್ಲವೆಂದರೆ, ಇದರ ವೈಭವದ ಬಗ್ಗೆ ನೀವೇ ಊಹಿಸಬಹುದು. ಇಂದ್ರ ಪೂಜಾ ಉತ್ಸವವನ್ನು ಇಲ್ಲಿ ಹತ್ತು ದಿನಗಳ ಕಾಲ ಅತ್ಯಂತ ಶ್ರದ್ಧಾ ಮತ್ತು ಭಕ್ತಿಗಳಿಂದ ಆಚರಿಸಲಾಗುತ್ತದೆ.
ದುರ್ಗಾ ಪೂಜಾ ಮತ್ತು ಕಾಳಿ ಪೂಜಾಗಳನ್ನು ಸಹ ಇದೇ ರೀತಿಯ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ. ಇಲ್ಲಿನ ಮಿಥಿಲಾ ಕಲೆಯು ಈ ಉಪ ಜಿಲ್ಲೆಯ ಖ್ಯಾತಿಗೆ ಕಿರೀಟವನ್ನು ಇಟ್ಟಿದೆ. ಮಿಥಿಲಾ ವರ್ಣಚಿತ್ರಗಳು ಅತ್ಯಂತ ಹಳೆಯ ಮಾದರಿಯ ವರ್ಣ ಚಿತ್ರಗಳಲ್ಲಿ ಒಂದಾಗಿದ್ದು, ಈ ಪ್ರಾಂತ್ಯವು ಅದಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿಗೆ ಭೇಟಿ ನೀಡಿದಾಗ ಈ ಪ್ರಾಂತ್ಯದಲ್ಲಿ ನೇಪಾಳದ ಪ್ರಭಾವವು ಸ್ವಲ್ಪ ಮಟ್ಟಿಗೆ ಇರುವುದನ್ನು ನಾವು ನೋಡಬಹುದು.