ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಮದನಪಲ್ಲಿ ಹವಾಮಾನ

ಮದನಪಲ್ಲಿಗೆ ನೀವು ಬರುವುದಕ್ಕೆ ಅಕ್ಟೋಬರ್ ನಿಂದ ಫೆಬ್ರುವರಿವರೆಗೂ ಉತ್ತಮ ಕಾಲ. ತಾಪಮಾನ ಈ ಅವಧಿಯಲ್ಲಿ ಉತ್ತಮವಾಗಿರುವುದರಿಂದ ಉತ್ತಮ ಪ್ರವಾಸೀ ಅನುಭವ ನಿಮ್ಮದಾಗುತ್ತದೆ. ಉಳಿದ ತಿಂಗಳುಗಳಲ್ಲಿ ಸೂರ್ಯ ಉರಿಯುತ್ತಿರುವುದರಿಂದ ಮದನಪಲ್ಲಿ ಸುತ್ತಾಟ ಅಷ್ಟು ಸುಲಭವಲ್ಲ. 

ನೇರ ಹವಾಮಾನ ಮುನ್ಸೂಚನೆ
Madanapalle, India 27 ℃ Partly cloudy
ಗಾಳಿ: 13 from the WSW ತೇವಾಂಶ: 66% ಒತ್ತಡ: 1009 mb ಮೋಡ ಮುಸುಕು: 75%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Tuesday 22 Aug 32 ℃90 ℉ 22 ℃ 72 ℉
Wednesday 23 Aug 32 ℃89 ℉ 23 ℃ 73 ℉
Thursday 24 Aug 31 ℃87 ℉ 23 ℃ 73 ℉
Friday 25 Aug 33 ℃91 ℉ 23 ℃ 73 ℉
Saturday 26 Aug 32 ℃89 ℉ 23 ℃ 73 ℉
ಬೇಸಿಗೆಗಾಲ

ಮಾರ್ಚ್ ತಿಂಗಳಿನಲ್ಲಿ ಆರಂಭವಾಗುವ ಬೇಸಿಗೆಗಾಲ ಸಾಮಾನ್ಯವಾಗಿ ಮೇ ಮಧ್ಯಭಾಗದ ವರೆಗೂ ಮುಂದುವರೆಯುತ್ತದೆ. ಈ ಅವಧಿಯಲ್ಲಿ ತಾಪಮಾನ 35-40 ಡಿಗ್ರಿ ಸೆಲ್ಶಿಯಸ್‌ನಷ್ಟು ಇರುತ್ತದೆ. ಈ ಅವಧಿಯಲ್ಲಿ ಹೆಚ್ಚಿನ ಪ್ರವಾಸಿಗರು ಪರ್ವತ ಪ್ರದೇಶಗಳಿಗೆ ತೆರಳಲು ಉತ್ಸಾಹ ತೋರುತ್ತಾರೆ.

ಮಳೆಗಾಲ

ಮೇ ತಿಂಗಳ ಮಧ್ಯಭಾಗಗದಲ್ಲಿ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್‌ ತಿಂಗಳಾಂತ್ಯದವರೆಗೂ ಇರುತ್ತದೆ. ಚೆನ್ನಾಗಿ ಮಳೆಯಾಗುವುದರಿಂದ ಮದನಪಲ್ಲಿ ಪ್ರವಾಸಕ್ಕೆ ಈ ಅವಧಿ ಯೋಗ್ಯವಲ್ಲ. ರಸ್ತೆಗಳು ಹದಗೆಟ್ಟು ಸಂಚಾರಕ್ಕೂ ಸಂಚಕಾರ ಬರುತ್ತಾದ್ದರಿಂದ ವರ್ಷದ ಬೇರೆ ಅವಧಿಯನ್ನೇ ನಿಮ್ಮ ಪ್ರವಾಸಕ್ಕೆ ಆಯ್ದುಕೊಳ್ಳುವುದು ಸೂಕ್ತ.

ಚಳಿಗಾಲ

ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಶಿಯಸ್ ವರೆಗೂ ಇಳಿಕೆ ಕಾಣುವ ಚಳಿಗಾಲ ನವೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗೂ ಇರುತ್ತದೆ. ಹೆಚ್ಚೆಂದರೆ ಈ ಅವಧಿಯಲ್ಲಿ 15-18 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇರುತ್ತದೆ. ಈ ಅವಧಿಯಲ್ಲಿ ಪ್ರವಾಸ ಕೈಗೊಳ್ಳಬಹುದಾಗಿದ್ದು, ನಿಮ್ಮ ಮನಸ್ಸಿಗೆ ಹೊಸ ಆಹ್ಲಾದ ಸಿಗುತ್ತದೆ.