Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ದ ರೆಸಿಡೆನ್ಸಿ

ದ ರೆಸಿಡೆನ್ಸಿ, ಲಖನೌ

2

ಲಖನೌನ ಪ್ರಮುಖ ಐತಿಹಾಸಿಕ ಕಟ್ಟಡಗಳಲ್ಲಿ ಒಂದಾಗಿರುವ ರೆಸಿಡೆನ್ಸಿಯು ಹಲವಾರು ಕಟ್ಟಡಗಳನ್ನು ಒಳಗೊಂಡಿರುವ ಸಂಕೀರ್ಣವಾಗಿದೆ. ಇದರ ನಿರ್ಮಾಣವು 1775ರಲ್ಲಿ ನವಾಬ್ ಅಸಫ್-ಉದ್- ದೌಲನಿಂದ ಆರಂಭವಾಗಿ, 1800ರಲ್ಲಿ ನವಾಬ್ ಸಾದತ್ ಅಲಿಖಾನ್‍ನಿಂದ ಪೂರ್ಣಗೊಂಡಿತು. ಗೋಮ್ಟಿ ನದಿಯ ದಂಡೆಯಲ್ಲಿರುವ ಈ ರೆಸಿಡೆನ್ಸಿಯನ್ನು ಅವಧ್‍ನ ನವಾಬನ ಆಸ್ಥಾನದಲ್ಲಿದ್ದ ಬ್ರಿಟೀಷರ ಪ್ರತಿನಿಧಿಯಾಗಿದ್ದ, ರೆಸಿಡೆಂಟ್ ಜನರಲನ ನಿವಾಸವನ್ನಾಗಿ ಬಳಸಲಾಗುತ್ತಿತ್ತು.

ಈ ಸಂಕೀರ್ಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ನಡೆದ ಐತಿಹಾಸಿಕ ಲಖನೌ ಮುತ್ತಿಗೆಯ ಘಟನೆಯಲ್ಲಿ ಪ್ರಧಾನ ಪಾತ್ರವಹಿಸಿತ್ತು. ಈ ರೆಸಿಡೆನ್ಸಿಯ ಬಹುತೇಕ ಪ್ರಮುಖ ಭಾಗಗಳು ಬ್ರಿಟೀಷರ ಸೇನೆ ಮತ್ತು ಭಾರತೀಯ ಬಂಡಾಯಗಾರರ ನಡುವಿನ ಹೋರಾಟದಲ್ಲಿ ನಾಶವಾಯಿತು. ಯುದ್ಧದ ನಂತರ ಇದನ್ನು ದುರಸ್ತಿಗೊಳಿಸಲಾಯಿತು. ಫಿರಂಗಿಯ ಗುಂಡುಗಳಿಂದ ಉಂಟಾದ ಬಿರುಕುಗಳನ್ನು ಮತ್ತು ಒಡೆದ ಗೋಡೆಗಳು ಇಂದಿಗು ಆ ದಿನಗಳನ್ನು ಮೆಲುಕು ಹಾಕುವಂತೆ ಮಾಡುತ್ತವೆ.

ಈ ಸಂಕೀರ್ಣದ ಸುತ್ತ ಸುಂದರವಾಗಿ ವಿನ್ಯಾಸಗೊಳಿಸಲಾಗಿರುವ ಉದ್ಯಾನವನವನ್ನು ನೋಡಬಹುದು. ಹೂವುಗಳಿಂದ ನಳನಳಿಸುವ ಈ ಉದ್ಯಾನವನ್ನು ನೋಡುವುದೇ ಒಂದು ಚಂದ. ಇಲ್ಲಿ ಶಿಥಿಲಗೊಂಡಿರುವ ಒಂದು ಹಳೆಯ ಚರ್ಚ್ ಹಾಗು ಕ್ರೈಸ್ತರ ರುದ್ರಭೂಮಿಯನ್ನು ಸಹ ನಾವು ನೋಡಬಹುದು. ಈ ರುದ್ರಭೂಮಿಯಲ್ಲಿ ಸುಮಾರು 2000 ಆಂಗ್ಲ ಸೈನಿಕರ, ಗಂಡಸರ,ಹೆಂಗಸರ ಮತ್ತು ಮಕ್ಕಳ ಸಮಾಧಿಗಳನ್ನು ನಾವು ನೋಡಬಹುದು. ಈ ರೆಸಿಡೆನ್ಸಿಯ ಕುರಿತಾಗಿ ಒಂದು ಧ್ವನಿ ಮತ್ತು ಬೆಳಕಿನ ಪ್ರದರ್ಶನ ಸಹ ಇಲ್ಲಿ ನಡೆಯುತ್ತದೆ.

ಪ್ರತಿ ಸಂಜೆ ನಡೆಯುವ ಈ ಪ್ರದರ್ಶನವು ರೆಸಿಡೆನ್ಸಿಯ ಇತಿಹಾಸದ ಕುರಿತಾಗಿ ನಮಗೆ ಮಾಹಿತಿಯನ್ನು ನೀಡುತ್ತದೆ. 1857ರ ದಂಗೆಯನ್ನು ಸ್ಮರಿಸುವ ಒಂದು ವಸ್ತು ಸಂಗ್ರಹಾಲಯ ಸಹ ಇಲ್ಲಿದೆ. ಈ ಸಂಗ್ರಹಾಲಯವು ಅವಧ್‍ನಲ್ಲಿ 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕುರಿತಾಗಿ ನಿಖರ ಮಾಹಿತಿಯನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat