ಹುಸೈನಾಬಾದ್ ಗಡಿಯಾರ ಗೋಪುರವು ಹುಸೈನಾಬಾದ್ ಇಮಾಂಬರಾದ ಎದುರುಗಡೆಯಿದೆ ಮತ್ತು ಪ್ರಸಿದ್ಧ ರುಮಿ ದರ್ವಾಜ್ ಗಿಂತ ಕೆಲವೇ ಮೈಲಿನ ಅಂತರದಲ್ಲಿದೆ. 67 ಮೀಟರ್ ಅಥವಾ 221 ಅಡಿ ಎತ್ತರವಿರುವ ಇದನ್ನು ರಾಷ್ಟ್ರದ ಅತ್ಯಂತ ಎತ್ತರದ ಕಟ್ಟಡವೆಂದು ಪರಿಗಣಿಸಲಾಗಿದೆ.
1887ರಲ್ಲಿ ವಾಸ್ತುಶಿಲ್ಲಿ ರೊಸಕೆಲ್ ಪೇನ್ ಇದನ್ನು ನಿರ್ಮಿಸಿದ್ದು, ಗಡಿಯಾರ ಗೋಪುರವು ಭಾರತದಲ್ಲಿ ವಿಕ್ಟೋರಿಯನ್-ಗೋಥಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾದ ಭವ್ಯ ಕಟ್ಟಡವಾಗಿದೆ. ಅವಧ್ ಸಂಯುಕ್ತ ಪ್ರಾಂತ್ಯದ ಮೊದಲ ಲೆಫ್ಟಿನೆಂಟ್ ಗವರ್ನರ್ ಸರ್ ಜಾರ್ಜ್ ಕೂಪರ್ ಅವರನ್ನು ಸ್ವಾಗತಿಸಲು ನವಾಬ್ ನಾಸಿರ್ ಉದ್ ದಿನ್ ಅವರು ಇದರ ನಿರ್ಮಾಣವನ್ನು ಆರಂಭಿಸಿದ್ದರು. ನಾಸಿರ್ ಸಾವನ್ನಪ್ಪಿದ ಬಳಿಕ ಇದರ ಕಾಮಗಾರಿ ನಿಂತಿತ್ತು. ಆದರೆ 1887ರಲ್ಲಿ ಇದನ್ನು ಅಂತಿಮವಾಗಿ ಪೂರ್ಣಗೊಳಿಸಲಾಗಿತ್ತು. ಆ ಕಾಲದಲ್ಲಿ ಈ ಕಟ್ಟಡಕ್ಕೆ ಸುಮಾರು 1.74 ಲಕ್ಷ ರೂ. ವೆಚ್ಚವಾಗಿತ್ತು.
ಗಗನಚುಂಬಿ ಗೋಪುರದಲ್ಲಿರುವ ಗಡಿಯಾರದ ಘಟಕಗಳನ್ನು ಲಂಡನ್ ನ ಲುಯಿಗೇಟ್ ಹಿಲ್ ನಿಂದ ತರಿಸಲಾಗಿದ್ದ ಫಿರಂಗಿ ಲೋಹದಿಂದ ತಯಾರಿಸಲಾಗಿತ್ತು. ಇದು ಹದಿನಾಲ್ಕು ಅಡಿ ಉದ್ದ ಮತ್ತು ಒಂದುವರೆ ಇಂಚಿನಷ್ಟು ದಪ್ಪವಿರುವ ಲೋಲಕ ವೆಸ್ಟ್ಮಿನಿಸ್ಟರ್ ಗಡಿಯಾರಕ್ಕಿಂತಲೂ ದೊಡ್ಡದಿದೆ. ಹೂವಿನ ಆಕಾರದ ಡಯಲ್ ಸುತ್ತಲೂ ಗಂಟೆಗಳು ರಿಂಗಣಿಸುತ್ತಾ ಸುತ್ತುತ್ತಿರುತ್ತದೆ.