Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಬೇಗಂ ಹಜರತ್ ಮಹಲ್ ಉದ್ಯಾನ

ಬೇಗಂ ಹಜರತ್ ಮಹಲ್ ಉದ್ಯಾನ, ಲಖನೌ

1

ಬೇಗಂ ಹಜರತ್ ಮಹಲ್ ಉದ್ಯಾನವನ್ನು ಅವಧ್ ನ ಕೊನೆಯ ನವಾಬ ವಜಿದ್ ಅಲಿಷಾ ನ ಪತ್ನಿಯ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು ಮತ್ತು ಇದಕ್ಕೆ ಆಕೆಯ ಹೆಸರನ್ನು ಇಡಲಾಗಿದೆ. ಇದು ನಗರದ ಮಧ್ಯಭಾಗದಲ್ಲಿದ್ದು, ಅವಧ್ ನ ಹೋಟೆಲ್ ಕ್ಲಾರ್ಕ್ಸ್ ಗೆ ಸಮೀಪದಲ್ಲಿದೆ.

ತನ್ನ ಪತಿಯನ್ನು ಕೊಲ್ಕತ್ತಾಗೆ ಗಡಿಪಾರು ಮಾಡಿದ ಬಳಿಕ ಬೇಗಂ ಲಖನೌ ಆಡಳಿತವನ್ನು ನೋಡಿಕೊಂಡು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದಳು. ಆದರೆ ಬಳಿಕ ನೇಪಾಳದಲ್ಲಿ ಆಶ್ರಯ ಪಡೆದುಕೊಂಡಿದ್ದು, 1879ರಲ್ಲಿ ನಿಧನರಾಗಿದ್ದರು.

ಸ್ವಾತಂತ್ರ್ಯ ಬಳಿಕ ಉತ್ತರ ಪ್ರದೇಶ ಸರ್ಕಾರ ಆಕೆಯ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಿತು ಮತ್ತು 1962 ಅಗಸ್ಟ್ 15ರಂದು ಇದನ್ನು ಸಾರ್ವಜನಿಕರಿಗಾಗಿ ತೆರೆಯಿತು. ಸ್ಮಾರಕದಲ್ಲಿ ಹಿತ್ತಾಳೆಯ ದದ್ದುಗಳೊಂದಿಗೆ ಅಮೃತಶಿಲೆಯ ಫಲಕ ಮತ್ತು ಅವಧ್ ನ ರಾಜ ಕುಟುಂಬದ ಅಧಿಕೃತ ಲಾಂಛನವಿದೆ.

ಈ ಉದ್ಯಾನ ಬೆಳಗ್ಗೆ ವಾಕಿಂಗ್ ಮಾಡುವವರಿಗೆ ಸ್ವರ್ಗವೆನಿಸಿದೆ. ಅಮೃತಶಿಲೆಯ ಹಾಸುಗಳಿರುವ ಹಾದಿಯ ಸುತ್ತಲು ಹುಲ್ಲಿನ ಸುಂದರ ಲಾನ್ ಗಳಿವೆ. ಪಾರ್ಕ್ ನಲ್ಲಿ ಕೃತಕ ಹೊಳೆಗಳಿಂದ ಚಿಮ್ಮುವ ಕಾರಂಜಿ ಮತ್ತು ಅದಕ್ಕೆ ಅಳವಡಿಸಲಾಗಿರುವ ಬಣ್ಣಬಣ್ಣದ ಬೆಳಕು ಸಂಜೆಯ ಹೊತ್ತಿನಲ್ಲಿ ಕಣ್ಣಿಗೆ ಮುದ ನೀಡುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat