Search
  • Follow NativePlanet
Share
ಮುಖಪುಟ » ಸ್ಥಳಗಳು» ಲಾಂಗ್ಲೆಂಗ್

ಲಾಂಗ್ಲೆಂಗ್ : ಸಾಹಸದ ದಾರಿ ನಿಮ್ಮನ್ನು ಕೈ ಮಾಡಿ ಕರೆಯುತ್ತಿದೆ

7

ಲಾಂಗ್ಲೆಂಗ್ ಇದು ನಾಗಾಲ್ಯಾಂಡ ರಾಜ್ಯದ ಹೊಸದಾಗಿ ರಚಿತವಾಗಿರುವ ಜಿಲ್ಲೆಯಾಗಿದೆ. ಇದು ಜಿಲ್ಲಾ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಲಾಂಗ್ಲೆಂಗ್ ಅನ್ನು ಕಿಫಿರೆ ಎಂಬ ನೂತನ ಜಿಲ್ಲೆಯ ಜೊತೆಗೆ ರಚಿಸಲಾಯಿತು. ಲಾಂಗ್ಲೆಂಗ್ ಅನ್ನು 2004, ಜನೇವರಿ 24 ರಂದು ಪೂರ್ಣ ಪ್ರಮಾಣದ ಜಿಲ್ಲೆಯಂದು ಘೋಷಿಸಲಾಯಿತು. 2004 ರಲ್ಲಿ ಈ ಜಿಲ್ಲೆಯನ್ನು ತುನ್ಸಾಂಗ ಜಿಲ್ಲೆಯಿಂದ ವಿಭಜಿಸಿ ರಚಿಸಲಾಗಿದೆ. ಇದು ಸಮುದ್ರ ಮಟ್ಟದಿಂದ 1066 ಮೀಟರ ಎತ್ತರದಲ್ಲಿ ನೆಲೆಸಿದೆ. ನೀವು ಲಾಂಗ್ಲೆಂಗ್ ನಲ್ಲಿ ಒಳ ಪ್ರವೇಶಿಸಲು ಆಂತರಿಕ ಪ್ರವೇಶ ಅನುಮತಿಯ ಪತ್ರವನ್ನು ಪಡೆಯಬೇಕಾಗುತ್ತದೆ.

ಲಾಂಗ್ಲೆಂಗ್ ಜನ ಮತ್ತು ಸಂಸ್ಕತಿ : ಪ್ರವಾಸಿಗರು ತಿಳಿದುಕೊಳ್ಳಬೇಕಾದ ಸಂಗತಿಗಳು

ಪೂಮ ನಾಗಗಳು ಲಾಂಗ್ಲೆಂಗ್ ನಲ್ಲಿ ಬಹು ಕಾಲದಿಂದಲೂ ವಾಸವಾಗಿದ್ದು ಅವರು ಅದನ್ನು ನಿಯಂತ್ರಿಸುತ್ತಾರೆ. ಈ ಪೂಮ ನಾಗಾಗಳು ಕುಂಬಾರಿಕೆ, ನೇಕಾರಿಕೆ ಮತ್ತು ಬಿದರಿನ ಕೆಲಸದಲ್ಲಿ ತುಂಬಾ ನೈಪುಣ್ಯತೆಯನ್ನು ಪಡೆದಿದ್ದಾರೆ. ಸಾಂಪ್ರದಾಯಿಕವಾಗಿ ನಾಗಾಗಳು ಕೃಷಿ ಕಾರ್ಯವನ್ನು ಸಹ ಮಾಡುತ್ತಾರೆ. ಈ ಪೂಮ ನಾಗಗಳ ಮೂಲದ ಕುರಿತು ಇನ್ನು ಖಚಿತ ಮಾಹಿತಿ ದೊರಕಿಲ್ಲ. ಆದರೆ ಮೌಖಿಕ ಸಂಪ್ರದಾಯದ ಪ್ರಕಾರ ಇದೊಂದು ಬುಡಕಟ್ಟು ಜನಾಂಗವಾಗಿದ್ದು, ಶಿಲಾಯುಗದಿಂದಲೂ ಆಸ್ತಿತ್ವದಲ್ಲಿದೆ. ಈ ಬುಡಕಟ್ಟು ಜನಾಂಗವು ಆವೋ ನಾಗಾ ಬುಡಕಟ್ಟು ಜನಾಂಗವನ್ನು ಹೋಲುತ್ತದೆ.

ಪೂಮ ನಾಗಗಳಲ್ಲಿ ಬಹುತೇಕರು ಕ್ರಿಶ್ಚಿಯನ ಧರ್ಮಕ್ಕೆ ಮತಾಂತರವಾಗಿದ್ದಾರೆ. ಈ ಕಾರಣದಿಂದಲೇ ಇಲ್ಲಿ ದೊಡ್ಡ ಮಟ್ಟಿಗೆ ಆಧುನಿಕತೆಯ ಗಾಳಿ ಬೀಸಿದೆ. ಆದರೆ ಅವರು ಈಗಲೂ ತಮ್ಮ ಹಬ್ಬದ ಸಮಯದಲ್ಲಿ ದೇಹಕ್ಕೆ ವಿಹೇ ಆಶಕ ಅಥವಾ ನೆಮಪಾಂಗ ಅಶಕ ಎಂಬ ಸಾಂಪ್ರದಾಯಿಕ ಶಾಲುಗಳನ್ನು ಸುತ್ತಿಕೊಳ್ಳುತ್ತಾರೆ. ನೀವು ಈ ಸುಂದರವಾದ ನಾಗಾ ಜನರ ಸಾಂಪ್ರದಾಯಿಕ ಉಡುಪುಗಳನ್ನು ಹಬ್ಬದ ಸಮಯದಲ್ಲಿ ನೋಡಿ ಆನಂದಿಸಬಹುದು.

ಲಾಂಗ್ಲೆಂಗ್ನಲ್ಲಿ ಮೋನ್ಯು ಉತ್ಸವದ ಹಬ್ಬವನ್ನು ಬೇಸಿಗೆ ಕಾಲದ ಆರಂಭದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಆಡಂಬರ ಮತ್ತು ವೈಭವದಿಂದ ಆಚರಿಸಲಾಗುತ್ತದೆ. ಸಾಹಸಿ ಪ್ರವಾಸಿಗರಿಗೆ ಒಂದು ರೋಚಕ ಸಂಗತಿಗಳ ತಾಣ. ಇದು ಚಳಿಗಾಲಕ್ಕೆ ವಿದಾಯ ಹೇಳಲು ಆಚರಿಸುವ ಹಬ್ಬವಾಗಿದೆ. ಮೋನ್ಯು ಹಬ್ಬವನ್ನು ಬೀಜ ಬಿತ್ತನೆ ಕಾರ್ಯ ಆದ ನಂತರ ಏಪ್ರೀಲ ತಿಂಗಳಿನಲ್ಲಿ ಆರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಹಬ್ಬವು ಪೂಮ ನಾಗಾಗಳ ಒಂದು ಪ್ರಮುಖ ಹಬ್ಬವಾಗಿದೆ.

ಲಾಂಗ್ಲೆಂಗ್ ಇದು ತನ್ನ ಸಾಹಸಮಯ ದಾರಿಗಳಿಗೆ ಹೆಚ್ಚು ಪ್ರಸಿದ್ದವಾಗಿದೆ. ಎಸ.ಯು.ವಿ ಮತ್ತು ದ್ವಿ ಚಕ್ರ ಕ್ರೂಸರ್ ವಾಹನದ ಮೇಲೆ ಈ ಸಾಹಸಮಯ ದಾರಿಯಲ್ಲಿ ದೀರ್ಘ ಪ್ರಯಾಣ ಹೋಗುವುದು ಎಂದರೆ ನಿಜಕ್ಕೂ ರೋಚಕಮಯ ಅನುಭವವೇ ಆಗಿದೆ. ಲಾಂಗ್ಲೆಂಗ್ ನಿಂದ ಚಾಂಗಟೋಂಗ್ಯನವರೆಗಿನ ದಾರಿಯು ಸಹ ಕಠಿಣವಾಗಿದ್ದು , ಇಲ್ಲಿ ಸಾಹಸಿ ಪ್ರಯಾಣಿಗರು ದಿನವೂ ಒಂದು ಅದ್ಭುತ ರೋಚಕ ಅನುಭವಕ್ಕಾಗಿ ಪ್ರಯಾಣ ಮಾಡುತ್ತಾರೆ. ಆ ಕಠಿಣ ದಾರಿಯ ಮಧ್ಯೆ ಅನೇಕ ಜನರನ್ನು ಭೇಟಿಯಾಗುತ್ತಾರೆ. ಜೊತೆಗೆ ಅಪಾರವಾದ ಧೂಳನ್ನು ಸಹ ತಮ್ಮೊಂದಿಗೆ ಕರೆದು ತರುತ್ತಾರೆ.

ಯೋಗ್ಯವಾದ ಕಾಲ

“ಮಳೆಗಾಲ ಅಲ್ಲದೇ ಇರುವ ದಿನಗಳು” ನಾಗಾಲ್ಯಾಂಡ ರಾಜ್ಯಕ್ಕೆ ಭೇಟಿ ಕೊಡಲು ಅತ್ಯಂತ ಯೋಗ್ಯವಾದ ಕಾಲವಾಗಿದೆ. ಈ ಸಲಹೆ ಲಾಂಗ್ಲೆಂಗಿಗೂ ಅನ್ವಯಿಸುತ್ತದೆ. ನೀವು ಅಕ್ಟೋಬರ್ ನಿಂದ ಮೇ ವರೆಗೂ ಲಾಂಗ್ಲೆಂಗ್ ಗೆ ಭೇಟಿ ಕೊಡಬಹುದು. ಇದು ಭೇಟಿ ಕೊಡಲು ಯೋಗ್ಯವಾದ ಸಮಯವಾಗಿದೆ. ವಸಂತ ಆಗಮನದ ಸಮಯದಲ್ಲಿ ಲಾಂಗ್ಲೆಂಗ್ ನಲ್ಲಿ ನಡೆಯುವ ಮೊನ್ಯು ಉತ್ಸವದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಪ್ರವಾಸಿಗರು ತಮ್ಮ ಲಾಂಗ್ಲೆಂಗ್ ಪ್ರವಾಸ ಯೋಜನೆಯನ್ನು ಹಾಕಿಕೊಂಡರೆ ಒಳ್ಳೆಯದು.

ಲಾಂಗ್ಲೆಂಗ್ ಪ್ರಸಿದ್ಧವಾಗಿದೆ

ಲಾಂಗ್ಲೆಂಗ್ ಹವಾಮಾನ

ಉತ್ತಮ ಸಮಯ ಲಾಂಗ್ಲೆಂಗ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲಾಂಗ್ಲೆಂಗ್

  • ರಸ್ತೆಯ ಮೂಲಕ
    ರಾಷ್ಟ್ರೀಯ ಹೆದ್ದಾರಿ 61 ಯಲ್ಲಿ ಲಾಂಗ್ಲೆಂಗ್, ಚಾಂಗಟೋಂಗ್ಯಾದೊಂದಿಗೆ ಸಂಪರ್ಕ ಸಾಧಿಸುತ್ತದೆ. ಇಲ್ಲಿ ಅನೇಕ ಸರಕಾರಿ ಬಸ್ಸುಗಳು, ಖಾಸಗಿ ವಾಹನಗಳು ಓಡಾಡುತ್ತಿರುತ್ತವೆ. ಲಾಂಗ್ಲೆಂಗ್ ಇದಕ್ಕೆ ಹತ್ತಿರ ಇರುವ ನಗರ ಎಂದರೆ ಮೊಕೊಕ್ಚುಂಗ್. ಹಾಗೆಯೇ ಕೋಹಿಮ ನಗರವು ಇಲ್ಲಿಂದ 230 ಕೀಲೊ ಮೀಟರ ದೂರದಲ್ಲಿದೆ. ಇಲ್ಲಿಯ ರಸ್ತೆಗಳು ಅಷ್ಟೊಂದು ಸುಗಮವಾಗಿಲ್ಲ. ಆದರೆ ನೀವು ಪ್ರಯಾಣಿಸುವಾಗ ನಿಮಗೆ ಪ್ರಶಾಂತ ಕಣಿವೆಗಳು, ಸುಂದರ ಬೆಟ್ಟಗುಡ್ಡಗಳು, ಆಕರ್ಷಕ ಹಳ್ಳಿಗಳು ನಿಮಗೆ ಕಾಣ ಸಿಗುತ್ತವೆ. ಇದರಿಂದ ನಿಮ್ಮ ಕಣ್ಣಿಗೆ ಹಬ್ಬವೋ ಹಬ್ಬ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಲಾಂಗ್ಲೆಂಗ್ನಲ್ಲಿ ರೇಲ್ವೆ ನಿಲ್ದಾಣವಿಲ್ಲ. ಇದಕ್ಕೆ ಹತ್ತಿರವಿರುವ ರೇಲ್ವೆ ನಿಲ್ದಾಣ ಎಂದರೆ ದಿಮಾಪುರ ರೇಲ್ವೆ ನಿಲ್ದಾಣ. ದಿಮಾಪುರ ರೇಲ್ವೆ ನಿಲ್ದಾಣವು ಲಾಂಗ್ಲೆಂಗ್ನಿಂದ ಸುಮಾರು 642 ಕಿ.ಮೀ ದೂರದಲ್ಲಿದೆ. ಗುವಾಹಟಿ ರೇಲ್ವೆ ನಿಲ್ದಾಣದಿಂದ ಪ್ರಮುಖ ರೇಲ್ವೆಗಳು ದಿಮಾಪುರ ರೇಲ್ವೆ ನಿಲ್ದಾಣವನ್ನು ತಲುಪುತ್ತವೆ. ದಿಮಾಪುರವು ನಾಗಾಲ್ಯಾಂಡ ರಾಜ್ಯದ ಎರಡನೇಯ ಅತಿ ದೊಡ್ಡ ನಗರವಾಗಿದೆ. ನಾಗಾಲ್ಯಾಂಡ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ಮೊಕೊಕ್ಚುಂಗ್ ತಲುಪಲು ಸಾಕಷ್ಟು ಬಸ್ಸುಗಳ ವ್ಯವಸ್ಥೆ ಇದ್ದು, ಈ ನಗರವು ಲಾಂಗ್ಲೆಂಗ್ ಗೆ ತುಂಬಾ ಹತ್ತಿರವಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ನಾಗಾಲ್ಯಾಂಡನಲ್ಲಿರುವ ಕೇವಲ ಒಂದೇ ಒಂದು ವಿಮಾನ ನಿಲ್ದಾಣ ಎಂದರೆ ದಿಮಾಪುರ ವಿಮಾನ ನಿಲ್ದಾಣ. ಆದ್ದರಿಂದ ನೀವು ಲಾಂಗ್ಲೆಂಗ್ ಅನ್ನು ವಿಮಾನದ ಮೂಲಕ ತಲುಪಲು ಇಚ್ಛಿಸಿದರೆ ನೀವು ಮೊದಲು ದಿಮಾಪುರಕ್ಕೆ ವಿಮಾನದ ಮೂಲಕ ಬರಬೇಕು. ನಂತರ ಅಲ್ಲಿಂದ ರಸ್ತೆ ಸಾರಿಗೆ ಮೂಲಕ ಲಾಂಗ್ಲೆಂಗ್ ಅನ್ನು ಸುಲಭವಾಗಿ ತಲುಪಬಹುದು. ಲಾಂಗ್ಲೆಂಗ್ ದಿಮಾಪುರದಿಂದ 642 ಕೀಲೊ ಮೀಟರ ದೂರದಲ್ಲಿದೆ, ಮತ್ತು ಇಂಫಾಲ ಬಳಸುದಾರಿ ಮೂಲಕ ಇಲ್ಲಿಗೆ ತಲುಪಲು ಸುಮಾರು 12 ಗಂಟೆಗಳು ಬೇಕು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat