ಲೋಣಾವಲದಲ್ಲಿರುವ ಅತ್ಯಂತ ಜನಪ್ರಿಯ ತಾಣ ಮರಂಜನ್ ಕೋಟೆ. ಸದ್ಯ ಈ ಕೋಟೆ ಶಿಥಿಲಗೊಂಡಿದೆ. ಆದರೆ ಮರಾಠರು ಈ ಪ್ರಾಂತ್ಯವನ್ನು ಆಳುತ್ತಿದ್ದ ಕಾಲದಲ್ಲಿ ಇದು ಅತ್ಯಂತ ಜನಪ್ರಿಯವಾಗಿತ್ತು. ಅದೂ ಅಲ್ಲದೆ, ಈ ಕೋಟೆಯನ್ನು ಶತ್ರುಗಳು ಅತ್ಯಂತ ಸುಲಭದಲ್ಲಿ ನಾಶ ಮಾಡಲೂ ಸಾಧ್ಯವಾಗುತ್ತಿರಲಿಲ್ಲ. ಮರಂಜನ್ ಕೋಟೆಯನ್ನು ಕಟ್ಟಿಸಿದ್ದು ಇಲ್ಲಿಂದ ಸುಂದರ ನೋಟವನ್ನು ಕಲ್ಪಿಸುವ ಉದ್ದೇಶದಿಂದ.
ಸರ್ಕಾರಿ ಮತ್ತು ಸ್ಥಳೀಯ ಅಧಿಕಾರಿಗಳು ಈ ಕೋಟೆಯನ್ನು ಸಂರಕ್ಷಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಾದದ್ದು ಅಗತ್ಯ. ಇಲ್ಲಿಂದ ಕೆಳಗೆ ನೋಡಿದರೆ ಅತ್ಯಂತ ರೋಮಾಂಚಕ ದೃಶ್ಯವನ್ನು ನೋಡಬಹುದು.