ಲೋಣಾವಲದ ಕೋಲಿ ಸಮುದಾಯದವರ ದೇವಸ್ಥಾನವಿದು. ಆಯಿ ಏಕ್ವಿರಾ ಎಂಬ ಬುಡಕಟ್ಟು ಜನರಿಗೆ ಈ ದೇವತೆ ಸೇರಿದ್ದು. ಇಲ್ಲಿನ ಕಾರ್ಲ ಗುಹೆಯ ಮುಖ್ಯ ಪ್ರವೇಶದ್ವಾರದಲ್ಲೇ ಈ ದೇವಸ್ಥಾನವಿದೆ.
ಕೋಲಿ ಸಮುದಾಯವು ನವರಾತ್ರಿ ಮತ್ತು ಚೈತ್ರ ಮಾಸದಲ್ಲಿ ಅತ್ಯಂತ ಸಂಭ್ರಮದಿಂದ ದೇವಸ್ಥಾನಕ್ಕೆ ಬಂದು ಹಬ್ಬವನ್ನು ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರವಾಸಿಗರು, ಕೋಲಿ ಸಮುದಾಯದವರ ಕೋಲಿ ನೃತ್ಯ ಮತ್ತು ಜಾನಪದ ಸಂಗೀತವನ್ನು ಸವಿಯಬಹುದು. ಈ ಕಡಿದಾದ ಬೆಟ್ಟವನ್ನು ಕೋಲಿ ಸಮುದಾಯದವರು ಗುಂಪುಗುಂಪಾಗಿ ಏರುವುದನ್ನು ನೋಡಬಹುದು.