ಲೋನಾರ್ ನಲ್ಲಿರುವ ದೈತ್ಯ ಸುದಾನ್ ದೇವಾಲಯ ಖಜುರಾಹೊ ದೇವಸ್ಥಾನದ ಮಾದರಿಯಲ್ಲಿದೆ. ಚಾಲುಕ್ಯರು ಈ ದೇಶವನ್ನು ಆಳುತ್ತಿದ್ದ ಸಮಯದಲ್ಲಿ ಅಂದರೆ ಸುಮಾರು ಕ್ರಿ.ಶ 6 ರಿಂದ 12 ನೇ ಶತಮಾನದ ಮಧ್ಯಭಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದ್ದು ವಿಷ್ಣು ದೇವರಿಗೆ ಅರ್ಪಣೆ ಮಾಡಲಾಗಿದೆ. ಈ ದೇವಸ್ಥಾನ ಸಮರೂಪವಲ್ಲದ ನಕ್ಷತ್ರದಂತಿದ್ದು ಹೆಮಡ್ ಪತಿ ವಾಸ್ತುಶೈಲಿಯನ್ನು ಪ್ರತಿಬಿಂಬಿಸುತ್ತದೆ.
ಇಲ್ಲಿ ಪೂಜಿಸಲ್ಪಡುವ ಸ್ಥಳದಲ್ಲಿ ಸುಂದರವಾದ ರಚನೆ, ಕೆತ್ತನೆಗಳನ್ನು ಹೊಂದಿರುವ ಗೋಡೆಗಳಿವೆ. ದೇವರ ಮೂರ್ತಿಯೆ ಲೋಹದಿಂದ ಮಾಡಲ್ಪಟ್ಟಿದ್ದು ಕಲ್ಲಿನ ಮೂರ್ತಿಯಂತೆ ಕಾಣುತ್ತದೆ. ಮಂದಿರದಲ್ಲಿ ಯಾವತ್ತೂ ಕತ್ತಲು ಆವರಸಿಕೊಂಡಿರುವ ಕಾರಣದಿಂದ ಗೋಡೆಗಳ ಮೇಲಿನ ಕೆತ್ತನೆಯ ಚಿತ್ತಾರವನ್ನು ಟಾರ್ಚ್ ಬೆಳಕಿನಲ್ಲಿಯೆ ಕಣ್ತುಂಬಿಕೊಳ್ಳಬೇಕು.
ದೇವಸ್ಥಾನದ ಪಾದಪೀಠ ಸುಮಾರು 1.5 ಮೀಟರ್ ಎತ್ತರವಿದ್ದು ಅರ್ಧಕ್ಕೆ ನಿಂತುಹೋದ ಮಾಡಿದ ಕೆಲಸಗಳು ಇದೊಂದು ಪಿರಾಮಿಡ್ ಗೋಪುರದ ರಚನೆಯನ್ನು ಸೂಚಿಸುತ್ತವೆ. ಹೊರಗಿನ ಗೋಡೆಗಳಲ್ಲೂ ಆ ಯುಗದ ಇತಿಹಾಸವನ್ನು ಸಾರುವ ರಚನೆಗಳಿವೆ.