ಲೇಹ್ ಭಾಗದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಲ್ಲಿ ಮೌಂಟೆನ್ ಬೈಕಿಂಗ್ ಕೂಡ ಒಂದು. ಸಾಹಸಪ್ರಿಯರಿಗೆ ಇಲ್ಲಿ ಸಿಗುವ ಒಂದು ಸುವರ್ಣಾವಕಾಶವೆಂದರೆ, ವಿಶ್ವದಲ್ಲೇ ಅತಿ ಎತ್ತರದಲ್ಲಿ ವಾಹನ ತಲುಪುವ ತಾಣಕ್ಕೆ ತೆರಳುವುದು. ಮನಾಲಿ ಹಾಗೂ ಲೇಹ್ ಮಾರ್ಗ ಒಟ್ಟು 485 ಕಿ.ಮೀ.ನಷ್ಟು ದೂರವನ್ನು ಹೊಂದಿದೆ. ಈ ಮಾರ್ಗ ಬೆಟ್ಟದ ಬೈಕ್ ಚಾಲನೆಗೆ ಸವಾಲೆನಿಸುವಂತಿದೆ. ಬೆಟ್ಟಗಳ ಮೇಲಿಂದ ಹಿಮಾಲಯ ವಲಯವನ್ನು ಸುತ್ತುವ ಅವಕಾಶ ಈ ಮೂಲಕ ಸಾಹಸಿಗಳಿಗೆ ಲಭಿಸುತ್ತದೆ. ಹೆಚ್ಚಿನದಾಗಿ ಹೇಳುವುದಾದರೆ ಪ್ರವಾಸಿಗರು ಇಲ್ಲಿನ ಆಕರ್ಷಕ ನೋಟಕ್ಕೆ ಮರುಳಾಗದೇ ಇರಲಾರರು. ಅತ್ಯಾಕರ್ಷಕ ಭೂಪ್ರದೇಶ ಸುತ್ತಾಟಕ್ಕೆ ಹೇಳಿ ಮಾಡಿಸಿದಂತಿದೆ.