ಜಂಗಲ್ ಸಫಾರಿ, ಲಾನ್ಸ್ ಡೌನ್ ಗೆ ಭೇಟಿ ನೀಡುವ ಪ್ರವಾಸಿಗರ ಒಂದು ಜನಪ್ರಿಯ ಚಟುವಟಿಕೆಯಾಗಿದೆ. ಸಮೃದ್ಧ ಹಸಿರು ಓಕ್ ಮತ್ತು ಪೈನ್ ಮರಗಳ ನಡುವೆ ಪ್ರಕೃತಿಯ ತೊಡೆಯ ಮೇಲಿನ ಅದ್ಭುತವಾದ ಆದರ್ಶ ತಾಣ ಇದಾಗಿದೆ. ಈ ಕಾಡುಗಳಲ್ಲಿ, ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಿಫುಲವಾಗಿದ್ದು ಪರಿಶೋಧನೆಯಲ್ಲಿ ಆಸಕ್ತಿ ಮೂಡಿಸುತ್ತದೆ. ಈ ಸ್ಥಳವು ತಂಪಾದ ಹವಾಮಾನ ಹೊಂದಿದ್ದು, ವರ್ಷದ ಎಲ್ಲಾ ಸಮಯದಲ್ಲೂ ಇದೇ ವಾತಾವರಣವಿರುತ್ತದೆ. ಜಂಗಲ್ ಸಫಾರಿಯಿಂದಲೂ ಕೂಡ ಸಮೃದ್ಧ ಹಸಿರು ಕಾಡುಗಳ ಪರಿದೃಶ್ಯಗಳನ್ನು ಅನುಭವಿಸಬಹುದು.