ಹವಾಘರ್, ಲಾನ್ಸ್ ಡೌನ್ ಒಂದು ಚಿತ್ರಸದೃಶ ಸ್ಥಳವಾಗಿದೆ. ಹಿಮದಿಂದ ಆವೃತವಾದ ಹಿಮಾಲಯದ ಸುಂದರ ವೀಕ್ಷಣೆಗಳನ್ನು ನೀಡುವಂತಹ ಅಮೋಘ ಸ್ಥಳ ಹವಾಘರ್! ಈ ಸ್ಥಳದ ಪ್ರಶಾಂತ ಪರಿಸರದ ಹತ್ತಿರದ ಸ್ಥಳಗಳನ್ನುಪರಿಶೋಧಿಸಲು ಹಂಬಲಿಸುವ ಪ್ರಯಾಣಿಕರಿಗೆ ಇದು ಸೂಕ್ತ ಸ್ಥಳವಾಗಿದ್ದು, ಚಾರಣ ಕೈಗೊಳ್ಳುವುದಕ್ಕೆ ಇಷ್ಟ ಪಡುವ ನಿಸರ್ಗ ಪ್ರೇಮಿಗಳಿಗೆ ಈ ಸ್ಥಳ ಒಂದು ಔತಣ. ಪ್ರಸಿದ್ಧ ಚಾರಣ ಮಾರ್ಗವನ್ನು ಹಾದುಹೋಗುತ್ತಾ ಜೈಹರಿಖಲ್ ಮೂಲಕ ಖೈಬರ್ ಪಾಸ್ ಅನ್ನೂ ಕೂಡಾ ನೋಡಬಹುದು.