ರಾಜಾ ಡೆಲ್ಡೋನ್ ನಮಂಗ್ಯಾಲ್ ನಿಂದ ಸ್ಥಾಪಿತವಾದ ಈ ಶೇಯ್ ಗೊಂಪಾ, ಲೇಹ್ನಿಂದ 15 ಕಿ.ಮೀ. ದೂರದಲ್ಲಿ ನೆಲೆಸಿದೆ. ಬುದ್ಧನ ಅತಿ ದೊಡ್ಡ ಬೆಳ್ಳಿಯ ವಿಗ್ರಹ ಹಾಗೂ ಅದಕ್ಕೆ ಚಿನ್ನದ ಲೇಪನ ಹೊಂದಿದ ಮೂರ್ತಿಯನ್ನು ಇದು ಹೊಂದಿದೆ. ಲಡಾಖ್ ಪ್ರದೇಶದಲ್ಲಿರುವ ಬುದ್ಧನ ವಿಗ್ರಹಗಳಲ್ಲಿಯೇ ಇದು ಎರಡನೇಯ ಅತಿ ದೊಡ್ಡ ವಿಗ್ರಹ ಅನ್ನಿಸಿಕೊಂಡಿದೆ. ಈ ಪ್ರದೇಶದ ನಿರ್ಮಾಣ 1655 ರಲ್ಲಾಯಿತು. ರಾಜ ಡೆಲ್ಡೋನ್ ನಮಂಗ್ಯಾಲ್ ಇದನ್ನು ನಿರ್ಮಿಸಿದ. ಇದು ಇದಲ್ಲದೇ ಲಹಾಚಿನ್ ಪಲಗ್ಯಾಜಿನ್ ಅಂತಲೂ ಕರೆಸಿಕೊಳ್ಳುತ್ತದೆ. ಇದು ರಾಜನು ತಮ್ಮ ತಂದೆಯ ಗೌರವಕ್ಕಾಗಿ ಇಟ್ಟ ಹೆಸರಾಗಿತ್ತು. ಅಲ್ಲದೇ ಇದು ಈ ಹಿಂದೆ ಲಡಾಖ್ನ ಬೇಸಿಗೆಯ ರಾಜಧಾನಿಯಾಗಿಯೂ ಸಹ ಬಳಕೆ ಆಗುತ್ತಿತ್ತು. ಹೆಮಿಸ್ ಆಶ್ರಮದ ಮೋಂಕ್ಗಳು ಪ್ರಸ್ತುತ ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ.