Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಹವಾಮಾನ

ಕುರುಕ್ಷೇತ್ರ ಹವಾಮಾನ

ಕುರುಕ್ಷೇತ್ರಕ್ಕೆ ಭೇಟಿ ನೀಡಲು ಚಳಿಗಾಲದ ಆರಂಭದ ದಿನಗಳು ಉತ್ತಮವಾದ ಸಮಯವಾಗಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಇಲ್ಲಿ ಮಾರ್ಚ್ ನಿಂದ ಜೂನ್ ತಿಂಗಳಿನವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಸಾಮಾನ್ಯವಾಗಿ 35 °ಸೆಲ್ಶಿಯಸ್‍ನಿಂದ 42 ° ಸೆಲ್ಶಿಯಸ್‍ವರೆಗೆ ಇರುತ್ತದೆ.  ಆದರೆ ಒಮ್ಮೊಮ್ಮೆ ಇಲ್ಲಿನ ಗರಿಷ್ಠ ಉಷ್ಣಾಂಶವು 47 ° ಸೆಲ್ಶಿಯಸ್‍ ಅನ್ನು ತಲುಪಿರುತ್ತದೆ.

ಮಳೆಗಾಲ

ಮಳೆಗಾಲವು ಇಲ್ಲಿ ಜೂನ್ ಅಂತ್ಯ ಭಾಗದಿಂದ ಆಗಸ್ಟ್ ತಿಂಗಳಿನವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಆರ್ದ್ರತೆಯು ಹೆಚ್ಚಾಗುತ್ತದೆ ಮತ್ತು ಅಧಿಕ ಧಗೆಯು ಕಾಡುತ್ತದೆ.ಆದರೆ ಮುಸ್ಸಂಜೆ ವೇಳೆಗೆ ಇಲ್ಲಿನ ಉಷ್ಣಾಂಶವು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ.

ಚಳಿಗಾಲ

ಇಲ್ಲಿ ಚಳಿಗಾಲವು ನವೆಂಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯವಾಗಿ 7 ° ಸೆಲ್ಶಿಯಸ್‍ನಿಂದ 22 ° ಸೆಲ್ಶಿಯಸ್‍ವರೆಗೆ ಇರುತ್ತದೆ. ಆದರೆ ಒಮ್ಮೊಮ್ಮೆ ಇಲ್ಲಿನ ಉಷ್ಣಾಂಶವು 1 ° ಸೆಲ್ಶಿಯಸ್‍ವರೆಗೆ ಕುಸಿಯುತ್ತದೆ.