ಶೇಖ್ ಚೆಹ್ಲಿ ಕಾ ಮಕ್ಬರವನ್ನು ಘನ ವಿದ್ವಾಂಸ, ಪ್ರಸಿದ್ಧ ಸೂಫಿ ಸಂತ ಮತ್ತು ಧಾರ್ಮಿಕ ಗುರುವಾದ ದಾರಾ ಶಿಖೋಹ್ನ ಸಮಾಧಿ. ಮೊಘಲ್ ಚಕ್ರವರ್ತಿ ಶಹ ಜಹಾನ್ ಈತನ ಕಟ್ಟಾನುಯಾಯಿ ಮತ್ತು ನಿಷ್ಟಾವಂತ ಭಕ್ತನಾಗಿದ್ದ.
ಶೇಖ್ ಚೆಹ್ಲಿಯ ಗೋರಿಯನ್ನು ಕುರುಕ್ಷೇತ್ರದ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಇದನ್ನು ಮಾಸಲು ಹಳದಿ ಬಣ್ಣದ ಕಲ್ಲುಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರ ಮೇಲೆ ಅಮೃತ ಶಿಲೆಯ ಗುಮ್ಮಟವನ್ನು ನಿರ್ಮಿಸಲಾಗಿದೆ. ಕೆಳ ಅಂತಸ್ತಿನಲ್ಲಿ ನಾವು ಇವರ ಸಮಾಧಿಯನ್ನು ಕಾಣಬಹುದು.
ಈ ಗೋರಿಗೆ ಸಮೀಪದಲ್ಲಿಯೇ ಇವರ ಪತ್ನಿಯ ಗೋರಿಯನ್ನು ಸಹ ಕಾಣಬಹುದು. ಇದನ್ನು ಮರಳುಗಲ್ಲಿನಿಂದ ನಿರ್ಮಿಸಲಾಗಿದ್ದು, ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸಲಾಗಿದೆ. ಈ ಕಟ್ಟಡದ ರಚನೆಯು ಆಗ್ರಾದಲ್ಲಿರುವ ತಾಜ್ಮಹಲ್ ರಚನೆಯನ್ನು ಹೋಲುತ್ತದೆ. ಈ ಎರಡು ಸ್ಮಾರಕಗಳನ್ನು ಭಾರತೀಯ ಪ್ರಾಚ್ಯಶಾಸ್ತ್ರ ಇಲಾಖೆಯು ಸಂಕಕ್ಷಿತ ಸ್ಮಾರಕಗಳೆಂದು ಗುರುತಿಸಿದ್ದಾರೆ.