ದರೋಹರ್ ಹರಿಯಾಣ ವಸ್ತು ಸಂಗ್ರಹಾಲಯವು ಹರ್ಯಾಣವಿ ಜನಪದ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರದ ಆಡಳಿತಕ್ಕೆ ಒಳಪಟ್ಟಿದೆ. ಈ ಕೇಂದ್ರವು ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂದಿನವರೆಗು ಈ ಕೇಂದ್ರಕ್ಕೆ ಜರ್ಮನಿ, ಅಮೆರಿಕಾ, ಆಸ್ಟ್ರೇಲಿಯಾ, ನಾರ್ವೆ, ರಷ್ಯಾ, ಚಿಲಿ, ಮಲೇಶಿಯಾ, ಮಾರಿಷಸ್, ಡೆನ್ಮಾರ್ಕ್, ಇಂಗ್ಲೇಂಡ್, ಫ್ರಾನ್ಸ್ ಮತ್ತು ದ.ಆಫ್ರಿಕಾಗಳಂತಹ ದೇಶಗಳಿಂದ ಸುಮಾರು 6 ಲಕ್ಷಕ್ಕೂ ಅಧಿಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ.
ಈ ಕೇಂದ್ರವು 3000ಕ್ಕೂ ಅಧಿಕ ಸಂಖ್ಯೆಯ ಅಪರೂಪದ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದೆ. ಇದು ಕೇವಲ ಪ್ರವಾಸಿಗರನ್ನಷ್ಟೇ ಅಲ್ಲದೆ ಜನಪದ ಸಂಸ್ಕೃತಿ, ಪರಂಪರೆ, ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ, ಸಂಪ್ರದಾಯ, ಕಟ್ಟುಪಾಡು , ಪ್ರಾಚ್ಯ ಶಾಸ್ತ್ರ, ಶಿಕ್ಷಣ, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗಗಳ ಸಂಶೋಧನಾರ್ಥಿಗಳನ್ನು ಸಹ ಆಕರ್ಷಿಸುತ್ತಿದೆ.