ಬಾಡ ಸಮುದ್ರ ತೀರವು ಈ ಸುತ್ತಲಿನ ಬೀಚ್ಗಳಲ್ಲೇ ಅತ್ಯಂತ ಸ್ವಚ್ಛವಾದದ್ದು. ಕುಮಟಾದ ತಮ್ಮ ಪ್ರವಾಸದಲ್ಲಿ ಪ್ರವಾಸಿಗರು ಈ ಸಮುದ್ರ ತೀರವನ್ನು ಭೇಟಿ ಮಾಡಲೇಬೇಕು. ಕರ್ಕಿಯಿಂದ ಗೋಕರ್ಣಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಪ್ರವಾಸಿಗರು ಬಾಡ ಬೀಚನ್ನು ನೋಡಬಹುದು. ಒಂದು ಕಡೆ ಕಲ್ಲು ಬಂಡೆಯಿದ್ದು ಇನ್ನೆರಡು ಕಡೆಯಿಂದ ಗುಡ್ಡಗಳು ಬೀಚನ್ನು ಸುತ್ತುವರಿದಿದೆ.