Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಹವಾಮಾನ

ಕುಮರಕೊಮ್ ಹವಾಮಾನ

ಕುಮರಕೊಮಿಗೆ ಭೇಟಿ ನೀಡಲು ಸೆಪ್ಟೆಂಬರ್ (ಮಳೆಗಾಲದ ನಿಂತ ಕೂಡಲೆ) ನಿಂದ ಮಾರ್ಚ್ (ಬೇಸಿಗೆ ಆರಂಭವಾಗುವುದಕ್ಕೆ ಮೊದಲು) ನಡುವಿನ ಕಾಲವು ಅತ್ಯುತ್ತಮ ಅವಧಿಯಾಗಿರುತ್ತದೆ. ಆಗ ಇಲ್ಲಿ ಸ್ಥಳ ವೀಕ್ಷಣೆ, ದೋಣಿ ಮನೆ ವಿಹಾರ, ಹಿನ್ನೀರಿನಲ್ಲಿ ವಿಹಾರ, ಜಲಕ್ರೀಡೆ ಮತ್ತು ಇನ್ನಿತರ ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬಹುದು. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ಕೊಡದಿರುವುದು ಉತ್ತಮ, ಏಕೆಂದರೆ ಆ ಸಮಯದಲ್ಲಿ ಹಿನ್ನೀರಿನಲ್ಲಿ ವಿಹರಿಸಲು ಸಾಧ್ಯವಿಲ್ಲ.

ಬೇಸಿಗೆಗಾಲ

ಬೇಸಿಗೆಯು ಕುಮರಕೊಮಿನಲ್ಲಿ ಮಾರ್ಚ್ ನಿಂದ ಶುರುವಾಗಿ ಮೇ ಅಂತ್ಯದವರೆಗು ಇರುತ್ತದೆ. ಈ ಋತುವಿನಲ್ಲಿ ಇಲ್ಲಿ ಮಿತವಾಗಿ ಬಿಸಿಲಿನಿಂದ ಕೂಡಿರುತ್ತದೆ. ಬೇಸಿಗೆಯ ದಿನಗಳಲ್ಲಿ ಇಲ್ಲಿನ ಉಷ್ಣಾಂಶವು 37° ಸೆಲ್ಶಿಯಸ್ ವರೆಗು ಏರುತ್ತದೆ. ಹಾಗಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಅಷ್ಟೇನು ಸಮಂಜಸಕರವಲ್ಲ.

ಮಳೆಗಾಲ

ಕುಮರಕೊಮಿಗೆ ಮಳೆಯು ಜೂನ್ ಪ್ರಾರಂಭದಲ್ಲಿಯೆ ಬಂದು ಅಪ್ಪಳಿಸುತ್ತದೆ.ಅಲ್ಲದೆ ಈ ಪ್ರಾಂತ್ಯವು ಮಳೆಗಾಲದಲ್ಲಿ ತಕ್ಕ ಮಟ್ಟಿಗೆ ಒಳ್ಳೆ ಮಳೆಯನ್ನೆ ಕಾಣುತ್ತದೆ. ಹಿನ್ನೀರಿನಲ್ಲಿ  ಮೋಜು ಮಾಡಲು ಬಯಸುವವರಿಗೆ ಈ ಸಮಯವು ಆಶಾದಾಯಕವಲ್ಲ. ಏಕೆಂದರೆ ದೋಣಿ ಮನೆಗಳು ಹಿನ್ನೀರಿನಲ್ಲಿ ವಿಹರಿಸಲು ಈ ಸಮಯದಲ್ಲಿ ನಿರ್ಬಂಧವನ್ನು ಹೇರಲಾಗಿರುತ್ತದೆ. ಆದರೆ ಪಕ್ಷಿ ವೀಕ್ಷಕರು ಈ ಸಮಯದಲ್ಲಿ ಹಲವಾರು ಪಕ್ಷಿಗಳನ್ನು ಕಾಣುವ ಅವಕಾಶವನ್ನು ಪಡೆಯಬಹುದು.

ಚಳಿಗಾಲ

ಚಳಿಗಾಲವು ಕುಮರಕೊಮಿನಲ್ಲಿ ನವೆಂಬರ್ ಪ್ರಾರಂಭದಲ್ಲಿಯೆ ಶುರುವಾಗುತ್ತದೆ ಹಾಗು ಫೆಬ್ರವರಿ ಪ್ರಾರಂಭದ ವಾರಗಳವರೆಗು ವಿಸ್ತರಿಸಿರುತ್ತದೆ.ಈ ಸಮಯವು ಇಲ್ಲಿನ ಸ್ಥಳ ವೀಕ್ಷಣೆಗೆ ಮತ್ತು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು  ಹಾಗು ಹಿನ್ನೀರಿನಲ್ಲಿ ದೋಣಿ ಮನೆಗಳಲ್ಲಿ ವಿಹರಿಸಲು ಹೇಳಿ ಮಾಡಿಸಿದ ತಾಣವಾಗಿರುತ್ತದೆ. ಈ ಕಾಲದಲ್ಲಿ ಇಲ್ಲಿ ಕನಿಷ್ಠ 18°ಸೆಲ್ಶಿಯಸ್ ವರೆಗೆ ಉಷ್ಣಾಂಶ ಕುಸಿದಿರುತ್ತದೆ. ಆಗ ಇಲ್ಲಿನ ಹವಾಗುಣವು ಆಹ್ಲಾದಕರವಾಗಿದ್ದು, ಪ್ರವಾಸಿಗರಿಗೆ ಮುದ ನೀಡುತ್ತದೆ.