Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಸೆಂಟ್.ಮೇರೀಸ್ ಚರ್ಚ್, ಚೆರಿಯಪಲ್ಲಿ

ಸೆಂಟ್.ಮೇರೀಸ್ ಚರ್ಚ್, ಚೆರಿಯಪಲ್ಲಿ, ಕುಮರಕೊಮ್

1

ಸೆಂಟ್.ಮೇರೀಸ್ ಚರ್ಚ್ ಕುಮರಕೊಮ್ ಬಳಿಯಲ್ಲಿರುವ ಅತ್ಯಂತ ಪ್ರಸಿದ್ಧ ಕ್ರೈಸ್ತರ ಆರಾಧನಾ ಸ್ಥಳವಾಗಿದೆ. ಇದು ಕೊಟ್ಟಾಯಂನಿಂದ 12 ಕಿ.ಮೀ ದೂರದಲ್ಲಿದೆ. ಈ ಚರ್ಚ್ 1579ರಲ್ಲಿ ನಿರ್ಮಿಸಲ್ಪಟ್ಟಿತು. ತನ್ನೊಳಗೆ ಹಲವು ಶತಮಾನಗಳಷ್ಟು ಇತಿಹಾಸವನ್ನು ಅಡಗಿಸಿಕೊಂಡಿರುವ ಇದು ಮಲಂಕರ ಸಂಪ್ರದಾಯದ ಕ್ರೈಸ್ತರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ.

ಇತಿಹಾಸದ ಪ್ರಕಾರ ಈ ಚರ್ಚನ್ನು ಕ್ನಾನಯ ಕ್ರೈಸ್ತರು ಮತ್ತು ವಡಕ್ಕುಂ ಭಗರ್ ಎಂಬ ಎರಡು ಗುಂಪುಗಳ ನಡುವೆ ಏರ್ಪಟ್ಟ ಭಿನ್ನಾಭಿಪ್ರಾಯಕ್ಕೆ ಪರಿಹಾರಾತ್ಮಕವಾಗಿ ನಿರ್ಮಿಸಲಾಯಿತಂತೆ. ಈ ಭಿನ್ನಾಭಿಪ್ರಾಯವನ್ನು ಆಗ ಇಲ್ಲಿನ ರಾಜನಾಗಿದ್ದ ತೆಕ್ಕುಂಕೂರ್ ರಾಜನು ಪರಿಹರಿಸ್ ವಡಕ್ಕುಂ ಭಗರ್ ಗುಂಪಿಗೆ ಭೂಮಿಯನ್ನು ದಾನ ಮಾಡಿ ಹೊಸ ಚರ್ಚ್ ನಿರ್ಮಿಸಲು ಸಹಾಯ ಮತ್ತು ಮಾರ್ಗದರ್ಶನವನ್ನು ನೀಡಿದನಂತೆ. ಹಾಗೆ ರೂಪುಗೊಂಡಿದ್ದೆ ಈ ಚರ್ಚ್.

ಈ ಚರ್ಚ್ ತನ್ನ ಅನುಪಮವಾದ ವಾಸ್ತುಶಿಲ್ಪದಿಂದಾಗಿ ಕಲಾಸಕ್ತರನ್ನು ಮತ್ತು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದರ ವಾಸ್ತುಶಿಲ್ಪ ಶೈಲಿಯು ಕೇರಳ ಮತ್ತು ಪೋರ್ಚುಗೀಸ್ ಶೈಲಿಯ ಸಂಯೋಜನೆಯನ್ನು ಒಳಗೊಂಡಿದೆ. ಚರ್ಚಿನ ಗೋಡೆಗಳಲ್ಲಿ ಚಿತ್ರಿಸಲಾಗಿರುವ ಚಿತ್ರಗಳು ಕ್ರೈಸ್ತ ಮತ್ತು ಕ್ರೈಸ್ತೇತರ ಅಂಶಗಳನ್ನು ಒಳಗೊಂಡಿವೆ. ಈ ಚರ್ಚಿನಲ್ಲಿ ನಡೆಯುವ ಪ್ರಮುಖ ವಾರ್ಷಿಕ ಉತ್ಸವವೆಂದರೆ ವಿಥುಕಲುಡೆ ಪೆರುನ್ನಾಳ್ (ಬೀಜಗಳ ಹಬ್ಬವೆಂದು ಸಹ ಕರೆಯಲ್ಪಡುತ್ತದೆ) . ಇದನ್ನು ಪ್ರತಿ ವರ್ಷ ಜನವರಿ 15ರಂದು ಆಚರಿಸುತ್ತಾರೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu